ಚಂಡೀಗಢ :ದೇಶದಲ್ಲಿ ಮತ್ತೊಮ್ಮೆ ಹುಡುಗಿರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಕಳುಹಿಸಿರುವ ಹೀನ ಕೃತ್ಯವೊಂದು ಚಂಡೀಗಢದಿಂದ ವರದಿಯಾಗಿದೆ. ಚಂಡೀಗಢ ನಗರದ ಪಿಜಿ (ಪೇಯಿಂಗ್ ಗೆಸ್ಟ್)ಯೊಂದರ ಬಾತ್ ರೂಂನಲ್ಲಿ ಕ್ಯಾಮರಾ ಅಳವಡಿಸಿ ತನ್ನೊಂದಿಗೆ ವಾಸಿಸುತ್ತಿದ್ದ ಹುಡುಗಿಯರ ಅಶ್ಲೀಲ ಫೋಟೋ ಮತ್ತು ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಮೇಲೆ ಪೊಲೀಸರು ಆರೋಪಿ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪ್ರಿಯಕರನನ್ನು ಅಮಿತ್ ಎಂದು ಗುರುತಿಸಲಾಗಿದೆ.
ಇಬ್ಬರ ಮೊಬೈಲ್ಗಳನ್ನು ವಶಕ್ಕೆ ಪಡೆದಿದರುವ ಪೊಲೀಸರು ಸಿಎಫ್‌ಎಸ್‌ಎಲ್ (ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯ) ಲ್ಯಾಬ್‌ಗೆ ಕಳುಹಿಸಿದ್ದಾರೆ. ಆರೋಪಿಗಳು ಎಷ್ಟು ಜನ ಹುಡುಗಿಯರ ವಿಡಿಯೋ ಮಾಡಿದ್ದಾರೆ. ಆ ವಿಡಿಯೋಗಳನ್ನು ಯಾರಿಗೆ ಕಳುಹಿಸಿದ್ದಾರೆ ಎಂಬುದನ್ನು ಲ್ಯಾಬ್ ವರದಿಯಲ್ಲಿ ಬಹಿರಂಗವಾಗಲಿದೆ. ಈ ಬಗ್ಗೆ ಹೈ ಅಲರ್ಟ್ ಆಗಿರುವ ಪೊಲೀಸರು ಎಲ್ಲ ರೀತಿಯಲ್ಲೂ ತನಿಖೆ ಮುಂದುವರೆಸಿದ್ದಾರೆ.
ಈ ಪಿಜಿಯಲ್ಲಿ ಐವರು ಹುಡುಗಿಯರು ವಾಸವಿದ್ದು, ಒಂದೇ ಸ್ನಾನಗೃಹವನ್ನು ಬಳಸುತ್ತಿದ್ದರು. ಎಂದಿನಂತೆ ಸ್ನಾನಕ್ಕೆ ಎಂದು ಬಾತ್ ರೂಂಗೆ ಸಂತ್ರಸ್ತ ಹುಡುಗಿ ಹೋದಾಗ ಗೀಸರ್ ಮೇಲೆ ಸಾಧನವೊಂದು ಮಿನುಗುತ್ತಿರುವುದು ಕಂಡು ಬಂದಿದೆ. ತಕ್ಷಣ ಈ ಬಗ್ಗೆ ತನ್ನ ಸಹವರ್ತಿಗೆ ಸಂತ್ರಸ್ತೆ ಹೇಳಿದಾಗ ಕ್ಯಾಮರಾ ಅಳವಡಿಸಿರುವುದು ಬೆಳಕಿಗೆ ಬಂದಿದೆ. ತಕ್ಷಣ ಭಯಭೀತರಾದ ಹುಡುಗಿಯರು ಪಿಜಿ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.