ಕರ್ನಾಟಕ

karnataka

ETV Bharat / bharat

ಮದುವೆಗೆ ನಿರಾಕರಿಸಿದ ಪ್ರಿಯತಮನನ್ನೇ ಕೊಂದ ಯುವತಿ! - ಕತ್ತು ಹಿಸುಕಿ ಕೊಲೆ

ಮದುವೆಯಾಗಿದ್ದರೂ ಮತ್ತೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ ವ್ಯಕ್ತಿ ಇದೀಗ ಯಮನ ಪಾದ ಸೇರಿದ್ದಾನೆ. ವಿವಾಹವಾಗಲು ನಿರಾಕರಿಸಿದ್ದಕ್ಕೆ ಆತನನ್ನು ಪ್ರೇಯಸಿಯೇ ಕೊಲೆ ಮಾಡಿರುವ ಆರೋಪ ಪ್ರಕರಣ ಮಹರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

girlfriend killed boyfriend
ಮದುವೆಗೆ ನಿರಾಕರಿದ ಪ್ರಿಯತಮನನ್ನೇ ಕೊಂದ ಯುವತಿ

By

Published : Aug 16, 2021, 12:18 PM IST

ಪುಣೆ (ಮಹಾರಾಷ್ಟ್ರ): ವಿವಾಹವಾಗಲು ನಿರಾಕರಿಸಿದ ವ್ಯಕ್ತಿಯನ್ನು ಆತನ ಪ್ರೇಯಸಿ ಕೊಲೆ ಮಾಡಿರುವ ಆರೋಪ ಪ್ರಕರಣ ಮಹಾರಾಷ್ಟ್ರದ ಪುಣೆಯ ಪಿಂಪ್ರಿ-ಚಿಂಚ್ವಾಡ್​​ನಲ್ಲಿ ನಡೆದಿದೆ. ಮೃತನ ಪತ್ನಿ ಈಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.

ಪುಣೆಯ ಭೋಸಾರಿ ಪ್ರದೇಶದ ನಿವಾಸಿ ಪೈಗಂಬರ್ ಗುಲಾಬ್ ಮುಜಾವರ್ (35) ಕೊಲೆಯಾದ ವ್ಯಕ್ತಿ. ಗುಲಾಬ್ ಮುಜಾವರ್​ಗೆ ಈಗಾಗಲೇ​​ ಮದುವೆಯಾಗಿದ್ದರೂ ಮತ್ತೊಬ್ಬ ಯುವತಿಯನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಕೆಲ ದಿನಗಳಿಂದ ಯುವತಿಯನ್ನು ಭೇಟಿ ಮಾಡಲು ಹಿಂದೆ ಸರಿಯುತ್ತಿದ್ದ ಗುಲಾಬ್, ಯುವತಿಯ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾನೆ.

ಇದನ್ನೂ ಓದಿ: ಒಬ್ಬನನ್ನ ಪ್ರೀತಿಸಿ ಮತ್ತೊಬ್ಬನೊಂದಿಗೆ ಮದುವೆ.. ಯುವತಿ ಕೊಲೆ ಮಾಡಿದ ಲವರ್​!

ಇದರಿಂದ ಬೇಸರಗೊಂಡ ಯುವತಿ ಆಗಸ್ಟ್​ 13 ರಂದು ಮಾತನಾಡಲೆಂದು ಪಿಂಪ್ರಿ-ಚಿಂಚ್ವಾಡ್​ನಲ್ಲಿನ ಲಾಡ್ಜ್​​ಗೆ ಗುಲಾಬ್​ನನ್ನು ಕರೆಯಿಸಿಕೊಂಡು, ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗ್ತಿದೆ. ಈ ಸಂಬಂಧ ಮೃತನ ಪತ್ನಿ ಪಿಂಪ್ರಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details