ಕಾನ್ಪುರ (ಉತ್ತರ ಪ್ರದೇಶ):ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ತೀವ್ರ ಗಾಯಗೊಂಡಿರುವ ಯುವಕ ಆಸ್ಪತ್ರೆ ಪಾಲಾಗಿದ್ದಾನೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ.
ನಡೆದ ಘಟನೆ ಹೀಗಿದೆ:ಇಲ್ಲಿನ ಚೌಬೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ವ್ಯಕ್ತಿಯೊಬ್ಬರು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಅದೇ ಗ್ರಾಮದ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಹೀಗಿದ್ದಾಗ ಸೋಮವಾರ ಮಧ್ಯರಾತ್ರಿ ಗೆಳತಿಯು ತನ್ನ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಾಳೆ. ಅಲ್ಲದೇ, ತನ್ನ ಇನ್ನೊಬ್ಬ ಗೆಳತಿಯನ್ನೂ ಆಕೆ ಕರೆಯಿಸಿಕೊಂಡಿದ್ದಳು. ಪ್ರಿಯಕರ ಮನೆಗೆ ಬಂದ ಬಳಿಕ ವಿಚಿತ್ರ ಬೇಡಿಕೆಯೊಂದನ್ನು ಆಕೆ ಇಟ್ಟಿದ್ದಾಳೆ.
ತನ್ನ ಇನ್ನೊಬ್ಬ ಸ್ನೇಹಿತೆಯ ಜೊತೆಗೂ ದೈಹಿಕ ಸಂಪರ್ಕ ಹೊಂದಲು ಸ್ವತಃ ಗೆಳತಿಯೇ ಆಫರ್ ನೀಡಿದ್ದಾಳೆ. ಇದು ಯುವಕನಿಗೆ ವಿಚಿತ್ರವೆನ್ನಿಸಿ, ತಾನು ಹಾಗೆ ಮಾಡಲು ನಿರಾಕರಿಸಿದ್ದಾನೆ. ಮಾತು ಕೇಳದ ಗೆಳತಿ ಪ್ರಿಯಕರನ ಮೇಲೆ ತೀವ್ರ ಒತ್ತಡ ಹೇರಿದ್ದಾಳೆ. ಇಷ್ಟಾದರೂ ಬಗ್ಗದ ಆತ ಇನ್ನೊಬ್ಬ ಮಹಿಳೆ ಜೊತೆ ದೈಹಿಕವಾಗಿ ಬೇರೆಯಲ್ಲ ಎಂದಿದ್ದಾನೆ. ಇದು ಗೆಳತಿಯ ಪಿತ್ತ ನೆತ್ತಿಗೇರಿಸಿದೆ. ಕೋಪದಲ್ಲಿ ಗೆಳತಿ ಆಕೆಯ ಗೆಳೆಯನ ಗುಪ್ತಾಂಗವನ್ನು ಬಾಯಿಯಿಂದ ಕಚ್ಚಿದ್ದಾಳೆ.