ರಾಜ್ಕೋಟ್ (ಗುಜರಾತ್) : ಬಾಲ್ಯದಲ್ಲಿ ಇರುವಾಗ ಆನೇಕ ಚಿಕ್ಕ ಮಕ್ಕಳು ಹೆಚ್ಚಾಗಿ ಆಟವಾಡುವಾಗ ನಾಣ್ಯಗಳು ಹಾಗೂ ಇತರ ಚಿಕ್ಕ ಗಾತ್ರದ ವಸ್ತುಗಳನ್ನು ನುಂಗಿ ಸಮಸ್ಯಯಿಂದ ಪರಾಗಿರುವ ಎಷ್ಟೋ ಸನ್ನಿವೇಶಗಳನ್ನು ನೋಡಿದ್ದೇವೆ. ಸರಿಯಾಗಿ ಪೋಷಕರು ಮಕ್ಕಳ ಕಡೆ ಗಮನ ಹರಿಸದ ಕಾರಣ ಇಂತಹ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಹೌದು ಗುಜರಾತ್ನ ರಾಜ್ಕೋಟ್ನಲ್ಲಿ ಶಿವಾನಿ ತ್ರಿವೇದಿ ಎಂಬ 10 ವರ್ಷದ ಬಾಲಕಿ ಆಟವಾಡುವಾಗ ತನ್ನ ಮೂಗಿಗೆ ರಬ್ಬರ್ ತುಂಡು ಹಾಕಿಕೊಂಡು ಬಾರಿ ಸಂಕಷ್ಟ ಎದುರಿಸಿದ ಘಟನೆಯೊಂದು ನಡೆದಿದೆ.
ಬಳಿಕ ಬಾಲಕಿ ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟವಾಗಿದ್ದು, ಸ್ವಲ್ಪ ದಿನಗಳ ನಂತರ ಮೂಗಿನಿಂದ ದುರ್ವಾಸನೆಯ ದ್ರವ ಮತ್ತು ರಕ್ತ ಹೊರಬರಲು ಪ್ರಾರಂಭಿಸಿದೆ. ಇದ್ದರಿಂದ ಪೋಷಕರು ಮೊದಲು ಬಾಲಕಿಗೆ ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ. ಆದರೆ, ಇದರಿಂದ ಬಾಲಕಿ ಸಮಸ್ಯೆಯಲ್ಲಿ ಸುಧಾರಣೆ ಕಂಡು ಬರದ ಕಾರಣ ಪೋಷಕರು ಆತಂಕಕ್ಕೊಳಗಾಗಿ ಕಳೆದ ಮೂರು ತಿಂಗಳಿನಿಂದ ನೋವಿನಲ್ಲಿದ್ದ ಬಾಲಕಿಗೆ ಏನಾಗಿರಬಹುದೆಂದು ರಾಜ್‌ಕೋಟ್‌ನ ಇಎನ್‌ಟಿ(ಕಿವಿ, ಮೂಗು ಮತ್ತು ಗಂಟಲು) ವೈದ್ಯರ ಬಳಿಗೆ ಕರೆ ತಂದಿದ್ದರು.
ಇದೇ ಸಮಯದಲ್ಲಿ ಡಾ.ಹಿಮಾನ್ಶು ಠಕ್ಕರ್ ಅವರು ಬಾಲಕಿಯ ಮೂಗಿನಲ್ಲಿ ದುರ್ಬೀನು ಹಾಕಿ ಪರೀಕ್ಷಿಸಿದಾಗ, ಆಳವಾಗಿ ಏನೋ ಅಂಟಿಕೊಂಡಿರುವುದು ಕಂಡು ಬಂದಿತ್ತು. ಬಳಿಕ ಕೆಲವೇ ಗಂಟೆಗಳಲ್ಲಿ ಮೂಗಿನ ಒಳಗಿನ ಚರ್ಮದಲ್ಲಿ ಸಿಲುಕಿಕೊಂಡಿದ್ದ ವಸ್ತುವನ್ನು ಬೈನಾಕ್ಯುಲರ್‌ಗಳಿಂದ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೊರ ತೆಗೆಯಲಾಗಿದೆ. ಈ ಸಂದರ್ಭದಲ್ಲಿ ಬಾಲಕಿ ಮೂಗಿನೊಳಗೆ ರಬ್ಬರ್ ತುಂಡು ಇರುವುದನ್ನು ಕಂಡು ವೈದ್ಯರು ಮತ್ತು ಪೋಷಕರೂ ಬೆಚ್ಚಿಬಿದ್ದಿದ್ದಾರೆ. ಸದ್ಯ ವ್ಯೆದ್ಯರ ಈ ಸಾಹಸದಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದು, ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವೈದ್ಯರು ಹೇಳುವುದೇನು?:ಇದೇ ವೇಳೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಹಿಮಾನ್ಶು ಠಕ್ಕರ್ ಅವರು ಮಾತನಾಡಿ ರಬ್ಬರ್ಅನ್ನು ತೆಗೆಯುವಾಗ ಸಾಕಷ್ಟು ಕಾಳಜಿಯನ್ನು ವಹಿಸಿದ್ದವು. ಅಂತಿಮವಾಗಿ ಮಗುವಿನ ಮೂಗಿನಿಂದ ರಬ್ಬರ್ ಹೊರ ತೆಗೆದಿದ್ದೇವೆ ಎಂದರು. ಅಷ್ಟೇ ಅಲ್ಲ ಮೂಗಿನ ಹಿಂಭಾಗದ ಆಳದಲ್ಲಿ ಸಿಲುಕಿದರೆ ಹೆಚ್ಚು ಅಪಾಯಕ್ಕೆ ಕಾರಣವಾಗಬಹುದು, ಹೀಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು. ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.