ಹೈದರಾಬಾದ್ (ತೆಲಂಗಾಣ): ದೇಶಾದ್ಯಂತ ಕರ್ನಾಟಕದ ಹಿಜಾಬ್ ವಿವಾದ ಭಾರಿ ಚರ್ಚೆಗೆ ಕಾರಣವಾಗಿರುವ ಈ ವೇಳೆಯಲ್ಲಿ "ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾಳೆ" ಎಂದು ಹೈದರಾಬಾದ್ ಕ್ಷೇತ್ರದ ಲೋಕಸಭಾ ಸಂಸದ ಹಾಗೂ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಡಿಯೋವೊಂದನ್ನು ಓವೈಸಿ ತಮ್ಮ ಟ್ವಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು, "ಹಿಜಾಬ್ ಧರಿಸಿದ ಮಹಿಳೆಯರು ಕಾಲೇಜಿಗೆ ಹೋಗುತ್ತಾರೆ, ಜಿಲ್ಲಾಧಿಕಾರಿಗಳು, ಮ್ಯಾಜಿಸ್ಟ್ರೇಟ್‌ಗಳು, ವೈದ್ಯರು, ಉದ್ಯಮಿಗಳಾಗುತ್ತಾರೆ. ಮುಂದೊಂದು ದಿನ ಹಿಜಾಬ್ ಧರಿಸಿದ ಹುಡುಗಿ ಭಾರತದ ಪ್ರಧಾನಿಯಾಗುತ್ತಾಳೆ. ಆದರೆ ಅದನ್ನು ನೋಡಲು ನಾನು ಜೀವಂತವಾಗಿಲ್ಲದಿರಬಹುದು. ಆದರೆ ಆಕೆ ಪ್ರಧಾನಿಯಾಗುವುದು ಸತ್ಯ" ಎಂದು ಭವಿಷ್ಯ ನುಡಿದಿದ್ದಾರೆ.