ಫಿರೋಜಾಬಾದ್(ಉತ್ತರ ಪ್ರದೇಶ): ಹದಿನೈದು ವರ್ಷದ ಬಾಲಕಿಯ ಮೇಲೆ ಬಸ್‌ನಲ್ಲೇ ಅತ್ಯಾಚಾರವೆಸಗಿರುವ ಪ್ರಕರಣ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಬಾಲಕಿ ತನ್ನ ಕುಟುಂಬದೊಂದಿಗೆ ಔರಿಯಾ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಿದ್ದಳು. ಸೋಮವಾರ ರಾತ್ರಿ 11 ಗಂಟೆಗೆ ಇವರು ಬದರ್‌ಪುರನಲ್ಲಿ ಬಸ್ ಹತ್ತಿದ್ದಾರೆ. ಈ ವೇಳೆ ಪೋಷಕರು ಬಸ್ ಕೆಳಗಡೆಯ ಸೀಟ್ನಲ್ಲಿ(lower berth) ಕುಳಿತುಕೊಂಡಿದ್ದು, ಬಾಲಕಿ ಮೇಲಿನ ಸೀಟ್(upper berth)ನಲ್ಲಿ ಕುಳಿತುಕೊಂಡಿದ್ದಳು.