ಕರ್ನಾಟಕ

karnataka

ETV Bharat / bharat

ತಾಲಿಬಾನ್​ ವಿರುದ್ಧ ಕಮೆಂಟ್​.. ಯುವತಿ ಪೋನ್​ ನಂಬರ್ ಅಶ್ಲೀಲ ಸೈಟ್​ನಲ್ಲಿ ಹರಿಯಬಿಟ್ಟ ಕಿಡಿಗೇಡಿಗಳು! - ಲಖನೌ ಅಪರಾಧ ಸುದ್ದಿ

ತಾಲಿಬಾನ್​ ವಿರುದ್ಧ ಕಮೆಂಟ್​ (commenting on taliban) ಮಾಡಿದಕ್ಕೆ ಯುವತಿಯ ಫೋನ್​ ನಂಬರ್​ ಅನ್ನು ಅಶ್ಲೀಲ ಸೈಟ್​ನಲ್ಲಿ ಅಪ್ಲೋಡ್​ (girl phone number uploaded on porn site) ಮಾಡಿರುವ ಘಟನೆ ಉತ್ತರ ಪ್ರದೇಶದ ಘಾಜಿಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Girl commented on Taliban  girl phone number uploaded porn site  girl filed case in Ghazipur police station  lucknow crime news  lucknow news  ತಾಲಿಬಾನ್​ ವಿರುದ್ಧ ಕಮೆಂಟ್​ ಯುವತಿಯ ಫೋನ್​ ನಂಬರ್​ನ್ನು ಅಶ್ಲೀಲ ಸೈಟ್​ನಲ್ಲಿ ಅಪ್ಲೋಡ್  ಘಾಜಿಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು  ಲಖನೌ ಅಪರಾಧ ಸುದ್ದಿ  ಲಖನೌ ಸುದ್ದಿ
ತಾಲಿಬಾನ್​ ವಿರುದ್ಧ ಕಮೆಂಟ್

By

Published : Nov 19, 2021, 1:31 PM IST

ಲಖನೌ (ಉತ್ತರಪ್ರದೇಶ):ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳ ಆಕ್ರಮಿತದ ಬಗ್ಗೆ ಕಮೆಂಟ್​ ಮಾಡಿದ ಯುವತಿಗೆ (commenting on taliban) ಕೆಲ ಕಿಡಿಗೇಡಿಗಳು ನಿಂದಿಸಿ ಅಶ್ಲೀಲ ಸೈಟ್​ನಲ್ಲಿ ಆಕೆಯ ನಂಬರ್​ ಅಪ್ಲೋಡ್ ​ (girl phone number uploaded on porn site) ​ ಮಾಡಿರುವ ಘಟನೆ ಘಾಜಿಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಇಲ್ಲಿನ ಇಂದಿರಾನಗರದ ನಿವಾಸಿ ಯುವತಿಯೊಬ್ಬರು ಎನ್‌ಜಿಒ ನಡೆಸುವುದರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಕೆಲವು ದಿನಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ವಾಪಸಾತಿ ಸಮಯದಲ್ಲಿ ತಾಲಿಬಾನ್​ಗಳು ಆ ಪ್ರದೇಶಗಳನ್ನೆಲ್ಲ ಆಕ್ರಮಿಸಿಕೊಂಡಿದ್ದರು. ಈ ಘಟನೆ ಖಂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಯುವತಿ ತಮ್ಮ ಅನಿಸಿಕೆಯನ್ನು (commenting on taliban) ಹಂಚಿಕೊಂಡಿದ್ದರು.

ನಂತರ ಯುವತಿ ಅನಿಸಿಕೆಗೆ ಸಾಕ್ಷಿ ಎಂ.ಸಿನೋ ಹೆಸರಿನ ಖಾತೆಯಿಂದ ಆಕ್ಷೇಪಾರ್ಹ ಕಾಮೆಂಟ್ ಬಂದಿದೆ. ಕಾಮೆಂಟ್​ನಲ್ಲಿ ಆ ವ್ಯಕ್ತಿ ಲೈಂಗಿಕ ದೌರ್ಜನ್ಯದ ಬಗ್ಗೆ ಬರೆದಿದ್ದಾರೆ. ಆ ಪೋಸ್ಟ್‌ನ ಸ್ಕ್ರೀನ್‌ಶಾಟ್ ಯುವತಿ ತೆಗೆದುಕೊಂಡು ಜಾಗೃತರಾಗಿದ್ದಾರೆ.

ಯುವತಿ ಫೋನ್​ಗೆ ಅಪರಿಚಿತರಿಂದ ಕರೆ

ಈ ಪೋಸ್ಟ್ ನಂತರ ಯುವತಿಯ ಮೊಬೈಲ್​ಗೆ (Young woman mobile) ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬರಲಾರಂಭಿಸಿದವು. ಕರೆ ಮಾಡಿದವರು ಆಕೆಯನ್ನು ನಿಂದಿಸಿ ಅವಾಚ್ಯವಾಗಿ ಮಾತನಾಡುತ್ತಿದ್ದರು. ಹೊಸ ಸಂಖ್ಯೆಗಳಿಂದ ನಿರಂತರವಾಗಿ ಕರೆಗಳು ಬರುತ್ತಿದ್ದರಿಂದ ಅವರು ಯುವತಿ ಚಿಂತಿತರಾದರು. ಅನೇಕ ಸಂಖ್ಯೆಗಳನ್ನು ಬ್ಲಾಕ್​ಲಿಸ್ಟ್​ಗೆ ಹಾಕಿದ್ರೂ ಸಹ ಸಮಸ್ಯೆ ಕಡಿಮೆಯಾಗಲಿಲ್ಲ.

ಒಂದು ಕರೆ ಮಾಡಿದ ಅನಾಮೀಯ ವ್ಯಕ್ತಿಗೆ ಯುವತಿ ನನ್ನ ಸಂಖ್ಯೆ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ. ಆ ವ್ಯಕ್ತಿ ನಿಮ್ಮ ಸಂಖ್ಯೆ ಅನೇಕ ಪೋರ್ನ್ ವೆಬ್‌ಸೈಟ್ - ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಸಿಕ್ಕಿದೆ ಎಂದು ಹೇಳಿದ್ದಾನೆ. ಈ ನಂಬರ್​ನ್ನು ಸಾಕ್ಷಿಯನ್ನು ಎಂ.ಸೋನೊ ಎಂಬವರ ಐಡಿಯಿಂದ ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದಾನೆ.

ಸಾಮಾಜಿಕ ಮಾಧ್ಯಮದಲ್ಲಿ ಶೇರ್​ ಆಗಿತ್ತು ನಂಬರ್​

ಸಂತ್ರಸ್ತೆ NGO ನೊಂದಿಗೆ ಮಾಸ್ಕ್​ ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ ಅದರ ಪ್ರಚಾರಕ್ಕಾಗಿ ಯುವತಿ ತನ್ನ ಮೊಬೈಲ್ - ವಾಟ್ಸ್​ಆ್ಯಪ್​ ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಆರೋಪಿ ಸಾಕ್ಷಿ ಇಲ್ಲಿಂದ ಯುವತಿ ನಂಬರ್ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಸಂತ್ರಸ್ತೆಯ ಪ್ರಕಾರ, ಹಲವಾರು ದಿನಗಳವರೆಗೆ ವಿದೇಶದಿಂದ ಕರೆಗಳು ಬರುತ್ತಲೇ ಇದ್ದವು.

ಯುವತಿ ಆಗಸ್ಟ್ 21ರಂದು ನೋಯ್ಡಾದಲ್ಲಿದ್ದರು. ಆಗ ಯುವತಿಗೆ ನಿಂದನೀಯ ಕರೆಗಳು ಬರಲಾರಂಭಿಸಿದವು. ಹೀಗಾಗಿ ಅವರು ನೋಯ್ಡಾ ಡಿಸಿಪಿ ಕಚೇರಿಗೆ ದೂರು ನೀಡಲು ತೆರಳಿದ್ದರು. ಆದರೆ ಯಾವುದೇ ಪ್ರಯೋಜನೆವಾಗಲಿಲ್ಲ. ಡಿಸಿಪಿ ಕಚೇರಿಯಲ್ಲಿ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಿದ್ದರು. ಬಳಿಕ ಲಖನೌದಲ್ಲಿ ಪ್ರಕರಣ ದಾಖಲಿಸಲು ಹೇಳಿದರು ಎಂದು ಯುವತಿ ಆರೋಪಿಸಿದ್ದಾರೆ. ಲಖನೌಗೆ ಬಂದ ನಂತರ ಎಸಿಪಿ ಗಾಜಿಪುರ ಅವರನ್ನು ಭೇಟಿ ಮಾಡಿದಾಗ ಪ್ರಕರಣ ದಾಖಲಾಯಿತು. ಈ ಘಟನೆ ಕುರಿತು ಲಖನೌ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details