ಕರ್ನಾಟಕ

karnataka

ETV Bharat / bharat

ಯುವತಿಯ ಕತ್ತು ಸೀಳಿ ಬರ್ಬರ ಹತ್ಯೆ... ಲವರ್​​ ಮೇಲೆ ಕುಟುಂಬದ ಆರೋಪ - ಯುವತಿಯ ಕತ್ತು ಸೀಳಿ ಬರ್ಬರ ಹತ್ಯೆ

ಕಳೆದ ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಯುವತಿಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

GIRL MURDERED BY SLITTING HER THROAT IN JHARKHAND
GIRL MURDERED BY SLITTING HER THROAT IN JHARKHAND

By

Published : Apr 15, 2022, 4:25 PM IST

ರಾಂಚಿ(ಜಾರ್ಖಂಡ್​):ಇಲ್ಲಿನ ಆದಿತ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವರ್ಣರೇಖಾ ಕಾಲೋನಿಯಲ್ಲಿ ವಾಸವಾಗಿದ್ದ ಯುವತಿಯೋರ್ವಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದರ ಹಿಂದೆ ಆಕೆಯ ಲವರ್​ ಕೈವಾಡವಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಮಹತೋ ಚಾಂಡಿಲ್ ಕಾಂಪ್ಲೆಕ್ಸ್​​ನಲ್ಲಿ ಕೆಲಸ ಮಾಡ್ತಿದ್ದ ಉಷಾರಾಣಿ ಕೊಲೆಯಾಗಿದ್ದು, ನಿನ್ನೆ ರಾತ್ರಿ ಆಕೆಯ ಕೊಲೆ ನಡೆದಿದೆ.

ಅನುಕಂಪದ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಂಡಿದ್ದ ಉಷಾ ರಾಣಿ ಕಳೆದ ಎರಡು ತಿಂಗಳಿಂದ ಸ್ವರ್ಣರೇಖಾ ಕಾಲೋನಿಯಲ್ಲಿ ವಾಸವಾಗಿದ್ದಳು. ನಿನ್ನೆ ರಾತ್ರಿ ಆಕೆಯ ಕಾಲು ಮತ್ತು ಕೈಗಳ ಮೇಲೆ ಸುಟ್ಟ ಗಾಯದ ಗುರುತು ಪತ್ತೆಯಾಗಿದ್ದು, ಬರ್ಬರವಾಗಿ ಕೊಲೆ ಮಾಡಲಾಗಿದೆ. ಘಟನಾ ಸ್ಥಳಕ್ಕಾಗಮಿಸಿರುವ ಪೊಕಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ರಸ್ತೆ ಪಕ್ಕ ಮಲಗಿದ್ದ ಬಡ ದಂಪತಿ ಮೇಲೆ ಹರಿದ ಕಾರು; ಪತಿ ಸಾವು, ಪತ್ನಿ,ಮಗು ಗಂಭೀರ

ಕುಟುಂಬಸ್ಥರು ತಿಳಿಸಿರುವ ಪ್ರಕಾರ, ಕೊಲೆಯ ಹಿಂದೆ ರಾಜೇಶ್ ಎಂಬಾತನ ಕೈವಾಡವಿದೆ ಎಂದಿದ್ದಾರೆ. ಇದೇ ಕಾಲೋನಿಯಲ್ಲಿ ವಾಸವಾಗಿದ್ದ ಈತ ಉಷಾರಾಣಿ ಜೊತೆ ಕಳೆದ ಕೆಲ ತಿಂಗಳ ಹಿಂದೆ ಬಲವಂತವಾಗಿ ಮದುವೆ ಮಾಡಿಕೊಂಡಿದ್ದನಂತೆ. ಇದಾದ ಬಳಿಕ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದನು. ಆದರೆ, ಕೆಲಸ ಸಿಕ್ಕ ಬಳಿಕ ಉಷಾ ಬೇರೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು. ಇದರಿಂದ ಆಕ್ರೋಶಗೊಂಡು ರಾಜೇಶ್ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ಹೇಳಲಾಗ್ತಿದೆ.

ABOUT THE AUTHOR

...view details