ಕರ್ನಾಟಕ

karnataka

By

Published : Nov 25, 2020, 4:05 PM IST

ETV Bharat / bharat

ವಿಷ ಸೇವಿಸಿ ಬದುಕಿದಾತ, ಹಸೆಮಣೆ ಏರಬೇಕಿದ್ದ ಪ್ರಿಯತಮೆಯ ಕೊಂದ!

ಕಲ್ಯಾಣ ಮಂಟಪ ಹತ್ತಬೇಕಾಗಿದ್ದ ಯುವತಿ ಪ್ರಿಯಕರ ಕೈಯಲ್ಲಿ ದಾರುಣ ಹತ್ಯೆಗೆ ಗುರಿಯಾಗಿರುವ ಘಟನೆ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ಮಂಡಲದ ಚಾಪಿರಿ ಗ್ರಾಮದಲ್ಲಿ ನಡೆದಿದೆ.

girl murdered by lover
ಪ್ರಿಯತಮೆಯ ಕೊಂದ ಪ್ರಿಯತಮ

ಕಲ್ಯಾಣ ದುರ್ಗ (ಅನಂತಪುರ): ಮೂರು ವರ್ಷಗಳಿಂದ ಪ್ರೀತಿಸಿ ಮನೆಯಲ್ಲಿ ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಜೋಡಿ ಮುಂದಾಯಿತು. ಆದರೆ, ಯುವಕ ವಿಷ ಸೇವಿಸಿದರೆ, ಯುವತಿ ಹಿಂದೇಟು ಹಾಕಿ ಅಲ್ಲಿಂದ ಕಾಲ್ಕಿತ್ತಳು. ಮತ್ತೊಂದು ಆಶ್ಚರ್ಯ ಸಂಗತಿಯೇನೆಂದರೆ ವಿಷ ಸೇವಿಸಿದ ಯುವಕನೇ ತನ್ನ ಪ್ರಿಯತಮೆ ಹತ್ಯೆಗೈದ..! ಸಾಯಬೇಕಿದ್ದ ಯುವಕ ಬದುಕಿದ್ದಾದರೂ ಹೇಗೆ?

ಇಷ್ಟೇ ನಡೆದಿದ್ದು?:

ಶಾಹಿದಾ ಬೇಗಂ (19) ಕೊಲೆಯಾದ ಯುವತಿ. ರಘು ಬಂಧಿತ ಆರೋಪಿ. ಶಾಹಿದಾ ಬೇಗಂ ಮತ್ತು ರಘು ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪೋಷಕರನ್ನು ಒಪ್ಪಿಸಿ ಹಸೆಮಣೆ ಏರಬೇಕೆಂಬ ಬಯಕೆ ಕೂಡ ಹೊಂದಿದ್ದರು. ಆದರೆ, ಅದು ಅವರ ಕನಸುಗಳಿಗೆ ಮಾತ್ರ ಸೀಮಿತವಾಯಿತು. ಪ್ರೇಮವಿವಾಹಕ್ಕೆ ಪೋಷಕರು ಲಕ್ಷ್ಮಣ ರೇಖೆ ಎಳೆದುಬಿಟ್ಟರು. ಇತ್ತ ಎರಡೂ ಮನೆಗಳಲ್ಲೂ ಬೇರೆ ಬೇರೆ (ಇಬ್ಬರಿಗೂ) ಮದುವೆ ಮಾಡಲು ನಿರ್ಧರಿಸಿದರು.

ಮನೆಯಿಂದಲೂ ಮದುವೆಗೆ ಹಸಿರು ನಿಶಾನೆ ಸಿಗಲಿಲ್ಲ. ಇತ್ತ ಬೇರೆಯವರೊಂದಿಗೆ ಸಪ್ತಪದಿ ತುಳಿಯಲು ಇಚ್ಚಿಸದ ಈ ಜೋಡಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು. ಆದರೆ, ಇಷ್ಟೆಲ್ಲಾ ನಡೆದ ಕಥೆ ತಿರುವು ಪಡೆದುಕೊಂಡಿತು. ಹೌದು. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ರಘು ವಿಷ ಸೇವಿಸಿದ. ಆದರೆ, ಯುವತಿ ಅದಕ್ಕೆ ಹಿಂದೇಟು ಹಾಕಿದಳು.

ಈ ಮೂಲಕ ಮನೆಯಲ್ಲಿ ನೋಡಿದ ಹುಡುಗನನ್ನು ಮದುವೆಯಾಗಲು ಸಿದ್ಧಳಾಗಿದ್ದಳು ಎಂಬುದನ್ನು ಪರೋಕ್ಷವಾಗಿ ಸೂಚಿಸಿದಳು. ಹೀಗಾಗಿ, ಅದನ್ನು ಅರಿತ ರಘು ಬದುಕಲೇಬೇಕು ಎಂಬ ಹಠದಿಂದ ಆಸ್ಪತ್ರೆಗೆ ದಾಖಲಾಗಿ ಜೀವ ಉಳಿಸಿಕೊಂಡ. ಆತ್ಮಹತ್ಯೆಗೆ ಸಹಕರಿಸದೆ ಬೇರೊಬ್ಬನ ಜೊತೆ ಮದುವೆಯಾಗಲು ಯುವತಿ ತಯಾರಾಗುತ್ತಿದ್ದಕ್ಕೆ ತೀವ್ರ ಬೇಸರಗೊಂಡಿದ್ದ ರಘು, ಅವಳನ್ನು ಕೊಲೆ ಮಾಡಲು ನಿರ್ಧರಿಸಿದ.

ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಶಾಹಿದಾ ಬೇಗಂಳನ್ನು ಜೊತೆ ಚೆನ್ನಾಗಿ ಮಾತನಾಡಿ ನಂಬಿಸಿದ. ಅವಳೊಂದಿಗೆ ಚೆನ್ನಾಗಿಯೇ ಮಾತನಾಡಿಕೊಂಡಿದ್ದ ಆತ, ನ.17ರಂದು ನಿನ್ನ ಜೊತೆ ಮಾತನಾಡಬೇಕು ಎಂದು ರಘು ಮನೆಯಿಂದ ಹೊರಗೆ ಕರೆದೊಯ್ದ. ಆದರೆ, ರಾತ್ರಿ 11 ಗಂಟೆಗೆ ಏಕಾಂಗಿಯಾಗಿ ರಘು ಮಾತ್ರ ಮನೆಗೆ ಮರಳಿದ್ದ. ಯುವತಿ ಕಾಣದಕ್ಕೆ ಭೀತಿಗೊಳಗಾಗಿದ್ದ ಪೋಷಕರು ಆತನನ್ನು ಪ್ರಶ್ನಿಸಿದ್ದರು. ಆದರೆ, ಆತ ಸರಿಯಾದ ಉತ್ತರ ನೀಡಲಿಲ್ಲ.

ಅನುಮಾನಗೊಂಡ ಯುವತಿಯ ಪೋಷಕರು, ಯುವಕನ ಮೇಲೆ ಮತ್ತು ಮಗಳು ನಾಪತ್ತೆಯಾಗಿದ್ದಾಳೆ ಎಂದು ನ.19ರಂದು ಪ್ರಕರಣ ದಾಖಲಿಸಿದರು. ರಘುನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ. ಕಣೆಕಲ್ಲು ಮಂಡಲದ ತುಂಬಿಗನೂರು ಸಮೀಪದ ಹೆಚ್​ಎಲ್​ಸಿ ಕಾಲುವೆಯಲ್ಲಿ ಯುವತಿಯ ಮೃತ ದೇಹ ದೊರಕಿದೆ.

ABOUT THE AUTHOR

...view details