ಕರ್ನಾಟಕ

karnataka

ETV Bharat / bharat

ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಭಾವಿ ಪತಿಯ ಕಿರಿ ಸಹೋದರ: 10 ಕೆಜಿ ಉಪ್ಪು ಸುರಿದು ಶವ ಹೂತಿದ್ದ ಖದೀಮ ಸೆರೆ - ಕೊಳೆತ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆ

ಸಹೋದರನನ್ನು ಮದುವೆಯಾಗುವ ಯುವತಿ ಮೇಲೆಯೇ ಯುವಕನೊಬ್ಬ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಕೊಂದು ಮೃತದೇಹ ಹೂತು ಹಾಕಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.

murder
ಕೊಲೆ

By

Published : Dec 23, 2022, 7:14 AM IST

ಬಿಹಾರ: ರಾಜಧಾನಿ ಪಾಟ್ನಾದಲ್ಲಿ ಮನಕಲುಕುವ ಘಟನೆಯೊಂದು ಜರುಗಿದೆ. ಇಲ್ಲಿನ ಜಾನಿಪುರದಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಆಕೆಯ ಭಾವಿ ಪತಿಯ ಕಿರಿಯ ಸಹೋದರನೇ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.

ಜೆಹಾನಾಬಾದ್‌ನಲ್ಲಿ ಅತ್ಯಾಚಾರ ಮತ್ತು ಕೊಲೆ: ಅರ್ವಾಲ್‌ ಪ್ರದೇಶದ ಯುವತಿಗೆ ಅದೇ ಜಿಲ್ಲೆಯ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಎರಡು ಕುಟುಂಬದ ಸದಸ್ಯರ ನಡುವೆ ಮದುವೆ ಮಾತುಕತೆ ನಡೆದಾಗ ಯುವತಿಯು ಗಂಡನ ಕಿರಿಯ ಸಹೋದರನೊಂದಿಗೆ ಮಾತನಾಡಲು ಪ್ರಾರಂಭಿಸಿದ್ದಳು. ಸಂಬಂಧಿಕರು ಎನ್ನುವ ನಂಬಿಕೆಯ ಮೇಲೆ ಆರೋಪಿ ಕರೆಗೆ ಓಗೊಟ್ಟು ಜೆಹಾನಾಬಾದ್‌ಗೆ ಬಂದಿದ್ದಾಳೆ. ಅಲ್ಲಿ ಆರೋಪಿಯು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದು, ಮಾತ್ರವಲ್ಲದೇ ಅವಳನ್ನು ಕೊಲೆ ಮಾಡಿದ್ದಾನೆ. ನಂತರ ಮೃತ ದೇಹವನ್ನು ಪಾಟ್ನಾಗೆ ತಂದು ಜನಿಪುರದಲ್ಲಿ ಹೂತಿದ್ದಾನೆ.

ನ.16 ರಿಂದ ಬಾಲಕಿ ನಾಪತ್ತೆ: ಮೃತಳ ತಂದೆ ಹೇಳುವಂತೆ ಆರೋಪಿಯು ನ.16ರಂದು ಮಗಳನ್ನು ಭೇಟಿಯಾಗಲು ಕರೆ ಮಾಡಿದ್ದ. ಅಂದಿನಿಂದ ಅವಳು ಕಾಣೆಯಾಗಿದ್ದಳು. ಈ ಕುರಿತು ಆರೋಪಿಯನ್ನು ಪ್ರಶ್ನಿಸಿದಾಗ ಆತ ಸೂಕ್ತ ಉತ್ತರ ನೀಡಲಿಲ್ಲ. ಬಳಿಕ ನವೆಂಬರ್ 25 ರಂದು ಪ್ರಕರಣ ದಾಖಲಿಸಿದ್ದೆವು. ಇದಾದ ಬಳಿಕ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ ಎಂದಿದ್ದಾರೆ.

ಸಾಕ್ಷ್ಯ ನಾಶಪಡಿಸಲು ಮೃತದೇಹದ ಮೇಲೆ 10 ಕೆಜಿ ಉಪ್ಪು ಸುರಿದ ಖದೀಮ: ಯುವತಿಯನ್ನು ಜೆಹಾನಾಬಾದ್‌ನ ಹೋಟೆಲ್‌ಗೆ ಕರೆದೊಯ್ದಿದ್ದಾಗಿ ಯುವಕ ಹೇಳಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದಾಗ ಅವಳನ್ನು ಕೊಂದಿದ್ದಾನೆ. ನಂತರ ಮೃತ ದೇಹವನ್ನು ಪಾಟ್ನಾಗೆ ತಂದು ಹೂತಿದ್ದಾನೆ. ಇಷ್ಟಾದರೂ ಯುವಕನಿಗೆ ಸಿಕ್ಕಿ ಬೀಳುತ್ತೇನೆ ಎನ್ನುವ ಭಯ ಕಾಡುತ್ತಿತ್ತು.

ಈ ಭಯ ಹೋಗಲಾಡಿಸಲು ಯುವಕ 10 ಕೆಜಿ ಉಪ್ಪನ್ನು ಖರೀದಿಸಿ ಬಾಲಕಿಯನ್ನು ಸಮಾಧಿ ಮಾಡಿದ ಸ್ಥಳಕ್ಕೆ ತೆರಳಿ, ಮಣ್ಣನ್ನು ತೆಗೆದುಹಾಕಿ ಮೃತದೇಹದ ಮೇಲೆ ಉಪ್ಪು ಹಾಕಿದ್ದಾನೆ. ಇದರಿಂದ ಮೃತ ದೇಹವು ಬೇಗನೆ ಕೊಳೆಯುತ್ತದೆ ಎಂದು ಪ್ಲಾನ್​ ಮಾಡಿದ್ದಾನೆ.

ಇದನ್ನೂ ಓದಿ:ಲೈಂಗಿಕ ಬಳಕೆಗಾಗಿ ಫೇಲ್​ ಆದ ವಿದ್ಯಾರ್ಥಿಗಳಿಗೆ ಪಾಸಿಂಗ್​ ಅಂಕ.. ತಾಂತ್ರಿಕ ವಿವಿ ಪ್ರಾಧ್ಯಾಪಕ ಅರೆಸ್ಟ್​

ABOUT THE AUTHOR

...view details