ಅಲಿಗಢ (ಉತ್ತರ ಪ್ರದೇಶ):ಚಿಕ್ಕ ವಯಸ್ಸಿನಲ್ಲಿ ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ದೊಡ್ಡ ಹೆಜ್ಜೆಗಳನ್ನು ಇಡುವ ಘಟನೆಗಳು ಆಗ್ಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಅಲಿಗಢದಲ್ಲಿ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ತಂದೆಯೊಬ್ಬ ತನ್ನ ಮಗಳಿಗೆ ಫುಟ್‌ಬಾಲ್ ಆಡುವುದು ಬೇಡ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಮಗಳು, ತನ್ನ ಕನಸು ನನಸಾಗಿಸಲು ಬಟ್ಟೆ ಮತ್ತು ಫುಟ್‌ಬಾಲ್, ಬೂಟುಗಳನ್ನು ಚೀಲದಲ್ಲಿ ಇಟ್ಟುಕೊಂಡು ಮನೆ ಬಿಟ್ಟು ಹೊರಟುಹೋಗಿದ್ದಾಳೆ.
ಇದರಿಂದ ಆತಂಕಗೊಂಡ ತಂದೆ ಬಾಲಕಿಗಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿ ತನ್ನ ತಂದೆಗೆ ಪತ್ರ ಬರೆದಿದ್ದು, ಅದರಲ್ಲಿ ನನ್ನ ಕನಸು ನನಸಾಗಲು ನೀವು ಬಿಡುವುದಿಲ್ಲ. ಹಾಗಾಗಿ ನಾನು ಮನೆಯಿಂದ ಹೊರಡುತ್ತಿದ್ದೇನೆ ಎಂದು ಬರೆದಿದ್ದಾರೆ. ನನ್ನನು ಕ್ಷಮಿಸಿ, 25ನೇ ವಯಸ್ಸಿನಲ್ಲಿ, ನಾನು ನನ್ನ ಕನಸನ್ನು ನನಸು ಮಾಡಿದ ನಂತರವೇ ಮನೆಗೆ ಹಿಂತಿರುಗುತ್ತೇನೆ ಎಂದು ಬಾಲಕಿ ತನ್ನ ಪತ್ರದಲ್ಲಿ ತಿಳಿಸಿದ್ದಾಳೆ.
ಕ್ರಿಸ್‌ಮಸ್ ದಿನವೇ ಮನೆ ಬಿಟ್ಟು ಹೋದ ಬಾಲಕಿ:ಕ್ವಾರ್ಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ವಾಸವಾಗಿರುವ ಪ್ರಾಧ್ಯಾಪಕ, ವೈದ್ಯರೊಬ್ಬರ ಮಗಳು ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆಗೆ ಫುಟ್‌ಬಾಲ್ ಎಂದರೆ ತುಂಬಾ ಇಷ್ಟ. ತಂದೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿಗೆ ಅವರ ಕುಟುಂಬ ಸದಸ್ಯರೊಬ್ಬರು, ಆಕೆಗೆ ಫುಟ್‌ಬಾಲ್ ಆಡದಂತೆ ತಡೆದು ಓದಲು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಮಗಳು ಕ್ರಿಸ್‌ಮಸ್ ದಿನವೇ (ಡಿಸೆಂಬರ್ 25ರಂದು) ಮನೆ ಬಿಟ್ಟು ಹೋಗಿದ್ದಳು. ಬಾಲಕಿ ತನ್ನ ತಂದೆಗೆ ಈ ಸಂಬಂಧ ಪತ್ರವೊಂದನ್ನು ಸಹ ಬರೆದಿಟ್ಟು ಹೋಗಿದ್ದಾಳೆ.