ಕರ್ನಾಟಕ

karnataka

ETV Bharat / bharat

17ರ ಹರೆಯಕ್ಕೆ ಪ್ರೀತಿ-ಪ್ರೇಮ: ಗೆಳೆಯನ ಸಹಾಯದಿಂದ ತಾಯಿಯನ್ನೇ ಕೊಂದ ಬಾಲಕಿ - ಹೈದರಾಬಾದ್​ ಅಪರಾಧ ಸುದ್ದಿ

ಹದಿನೇಳನೇ ವಯಸ್ಸಿಗೆ ಪ್ರೀತಿಯಲ್ಲಿ ಬಿದ್ದ ಬಾಲಕಿ ತನ್ನ ತಾಯಿಯನ್ನು ಗೆಳೆಯನ ಸಹಾಯದಿಂದ ಕೊಂದಿದ್ದಾಳೆ.

ಗೆಳೆಯನ ಸಹಾಯದಿಂದ ತಾಯಿಯನ್ನೇ ಹತ್ಯೆಗೈದ ಬಾಲಕಿ
ಗೆಳೆಯನ ಸಹಾಯದಿಂದ ತಾಯಿಯನ್ನೇ ಹತ್ಯೆಗೈದ ಬಾಲಕಿ

By

Published : Oct 19, 2021, 9:11 AM IST

ಹೈದರಾಬಾದ್‌: ತಮ್ಮ ಸಂಬಂಧವನ್ನು ವಿರೋಧಿಸಿದ್ದಕ್ಕೆ ಅಪ್ರಾಪ್ತ ಮಗಳೇ ತನ್ನ ತಾಯಿಯನ್ನು ಗೆಳೆಯನ ಸಹಾಯದಿಂದ ಕೊಲೆ ಮಾಡಿದ್ದಾಳೆ. ಹೈದರಾಬಾದ್‌ನ ಚಿಂತಾಲ್‌ಮೆಟ್‌ನಲ್ಲಿ ಈ ಘಟನೆ ನಡೆದಿದೆ.

ಹದಿನೇಳನೇ ವಯಸ್ಸಿಗೆ ಪ್ರೀತಿಯಲ್ಲಿ ಬಿದ್ದ ಬಾಲಕಿ ತನ್ನ ತಾಯಿಯನ್ನು ಗೆಳೆಯನ ಸಹಾಯದಿಂದ ಕೊಂದಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು 17 ವರ್ಷದವರು. ಹೀಗಾಗಿ, ಬಾಲಕಿಯ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಕಾರಣಕ್ಕೆ ಕುಪಿತಗೊಂಡ ಮಗಳು ಹೆತ್ತ ತಾಯಿಯನ್ನೇ ಮುಗಿಸಿದ್ದಾಳೆ.

ಆಗಾಗ್ಗೆ ತನ್ನ ಗೆಳೆಯನನ್ನು ತನ್ನ ಮನೆಗೆ ಕರೆದುಕೊಂಡು ಬರುತ್ತಿದ್ದ ಬಾಲಕಿ ತನ್ನ ತಾಯಿಯೊಂದಿಗೆ ಜಗಳವಾಡುತ್ತಿದ್ದಳಂತೆ. ಅಂತೆಯೇ ನಿನ್ನೆಯೂ ಕೂಡಾ ನಡೆದ ಜಗಳ ಅತಿರೇಕಕ್ಕೆ ತಿರುಗಿದ್ದು, ತಾಯಿಯ ಕುತ್ತಿಗೆಗೆ ದುಪಟ್ಟಾ ಬಿಗಿದು ಗೆಳೆಯನ ಸಹಾಯದಿಂದಲೇ ಕೊಲೆ ಮಾಡಿದ್ದಾಳೆ. ನಂತರ ತನ್ನ ತಾಯಿ ಬಿದ್ದು ಮೃತಪಟ್ಟಿದ್ದಾಳೆ ಎಂದು ನೆರೆಹೊರೆಯವರಿಗೆ ಸುಳ್ಳು ಹೇಳಿದ್ದಾಳೆ. ಆ ಸಮಯದಲ್ಲಿ ಆಕೆಯ ತಂದೆ ಮನೆಯಲ್ಲಿ ಇರಲಿಲ್ಲ.

ಈ ಘಟನೆ ಸಂಬಂಧ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದಾಗ, ಅವರು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.

ABOUT THE AUTHOR

...view details