ಲಖನೌ, ಉತ್ತರಪ್ರದೇಶ: ಹದಿಹರೆಯದ ಬಾಲಕಿಯನ್ನು ಅಪಹರಿಸಿ ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಸಾಮೂಹಿಕ ಅತ್ಯಾಚಾರದ ನಂತರ ಆರೋಪಿಗಳು ಬಾಲಕಿಯನ್ನು ಮರಕ್ಕೆ ನೇತು ಹಾಕಿ ಕೊಲ್ಲಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದೇ ವೇಳೆ, ಸಂತ್ರಸ್ತೆಯ ತಂದೆಗೂ ಕೂಡ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಪೊಲೀಸರ ಮಾಹಿತಿ ಮತ್ತು ದೂರಿನ ಪ್ರಕಾರ, ಮೋಹನ್‌ಲಾಲ್‌ಗಂಜ್‌ನ ಹಳ್ಳಿಯಲ್ಲಿ ವಾಸಿಸುವ ಕಾರ್ಮಿಕರೊಬ್ಬರು ನಾಲ್ಕು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಅವರ ಪತ್ನಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಕಳೆದ ಭಾನುವಾರ ಸಂಜೆ 5 ಗಂಟೆಗೆ 17 ವರ್ಷದ ಮಗಳು ಮಾರುಕಟ್ಟೆಯಿಂದ ತರಕಾರಿ ಖರೀದಿಸಿ ಮನೆಗೆ ಮರಳುತ್ತಿದ್ದರು. ಮಾರ್ಗಮಧ್ಯೆ ಗ್ರಾಮದ ಅನಿಲ್, ವಿಶಾಲ್ ಮತ್ತು ಕರಣ್ ಎಂಬುವರು ಬಾಲಕಿಯನ್ನ ಭೇಟಿಯಾಗಿದ್ದಾರೆ. ಮನೆಗೆ ಬಿಟ್ಟು ಹೋಗುತ್ತೇವೆ ಅಂತಾ ಹೇಳಿ ಬಾಲಕಿಯನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಪರಿಚಯಸ್ಥರಾದ ಹಿನ್ನೆಲೆ ಬಾಲಕಿ ಸಹ ಬೈಕ್ನಲ್ಲಿ ತೆರಳಿದ್ದಾರೆ.
ಇದಾದ ಬಳಿಕ ಸಂತ್ರಸ್ತೆಯನ್ನು ಪ್ರತ್ಯೇಕ ಸ್ಥಳದಲ್ಲಿ ಕಟ್ಟಿ ಹಾಕಿ ಮೂವರೂ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ಸೋಮವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಗ್ರಾಮದ ತೋಟದ ಮರಕ್ಕೆ ದುಪಟ್ಟಾ ಅಥವಾ ವೇಲ್ನಿಂದ ನೇಣು ಹಾಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ, ಅವರ ಪ್ಲ್ಯಾನ್ ವಿಫಲವಾಗಿದ್ದು, ಆರೋಪಿಗಳು ವೇಲ್ ಕತ್ತರಿಸಿ ಬಾಲಕಿಯನ್ನು ಆಕೆಯ ಮನೆಯ ಹೊರಗೆ ಎಸೆದು ಪರಾರಿಯಾಗಿದ್ದಾರೆ. ಸಂತ್ರಸ್ತೆಗೆ ಪ್ರಜ್ಞೆ ಮರಳಿದ ನಂತರ ಆಕೆ ಮನೆಗೆ ತೆರಳಿದ್ದು, ಸಾಮೂಹಿಕ ಅತ್ಯಾಚಾರದ ಬಗ್ಗೆ ತನ್ನ ತಂದೆಗೆ ತಿಳಿಸಿದ್ದಾಳೆ. ವಿಷಯ ತಿಳಿದ ಕೂಡಲೇ ಸಂತ್ರಸ್ತೆಯ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ.
ಮೂವರು ಆರೋಪಿಗಳು ಅರೆಸ್ಟ್: ಅತ್ಯಾಚಾರದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಗಿ ಸಂತ್ರಸ್ತೆಯ ತಂದೆ ಹೇಳುತ್ತಾರೆ. ಈ ಕುರಿತು ಕನಕಹಾಳ ಹೊರಠಾಣೆ ಪ್ರಭಾರಿ ಸಾಮಾನ್ಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಆರ್ಯ ಮತ್ತು ಎಸಿಪಿ ನಿತಿನ್ ಸಿಂಗ್ ಅವರು ಸಂತ್ರಸ್ತೆಯ ತಂದೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಓದಿ:ತೇಜಸ್ ರೈಲಿನಲ್ಲಿ ಆಮ್ಲಜನಕದ ಕೊರತೆಯಿಂದ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ