ಭೋಪಾಲ್(ಮಧ್ಯಪ್ರದೇಶ):ಮೊಬೈಲ್ಗೋಸ್ಕರ ಸಹೋದರನೊಂದಿಗೆ ಜಗಳವಾಡಿದ ಯುವತಿಯೊಬ್ಬಳು ನೀರಿನ ಕೊಳಕ್ಕೆ ಹಾರಿ ಪ್ರಾಣ ಕಳೆದುಕೊಳ್ಳಲು ಮುಂದಾಗಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಸಹೋದರನ ಬಳಿಕ ಕ್ಯಾಮೆರಾ ಮೊಬೈಲ್ ಕೇಳಿದ್ದಾಳೆ. ಅದು ಸಿಗದಿದ್ದಾಗ ಕೋಪದಿಂದ ಹೊರಬಂದು ನೀರಿನ ಕೊಳಕ್ಕೆ ಹಾರಿದ್ದಾಳೆ. ತಕ್ಷಣವೇ ಅಲ್ಲಿ ವಾಕಿಂಗ್ ಮಾಡ್ತಿದ್ದ ಕೆಲವರು ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಆಗಮಿಸಿ ಆಕೆಯನ್ನ ಕೊಳದಿಂದ ಹೊರತೆಗೆದಿದ್ದಾರೆ.