ಸೀತಾಪುರ: ಉತ್ತರಪ್ರದೇಶದ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. ಈ ನಡುವೆ ತಾನಂದುಕೊಂಡಿದ್ದ ಅಂಕ ಬಂದಿಲ್ಲವೆಂದು ಮನನೊಂದ ವಿದ್ಯಾರ್ಥಿನಿಯೊಬ್ಬಳು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಗಳಿಸಿದ್ದ ಅಂಕ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ..
ಸೀತಾಪುರದ ಮಹಮೂದಾಬಾದ್ ತಹಶೀಲ್‌ನಲ್ಲಿರುವ ಸೀತಾ ಇಂಟರ್ ಕಾಲೇಜಿನ ಇಂಟರ್‌ಮೀಡಿಯೇಟ್ ವಿದ್ಯಾರ್ಥಿನಿ ಗರಿಮಾ ವರ್ಮಾ ಅವರ ಮಧ್ಯಂತರ ಪರೀಕ್ಷೆ ಫಲಿತಾಂಶ ಶನಿವಾರ ಸಂಜೆ ಬಂದಿತ್ತು. ಪರೀಕ್ಷಾ ಫಲಿತಾಂಶದಲ್ಲಿ ಗರಿಮಾ ಶೇ. 81 ಅಂಕಗಳನ್ನು ಪಡೆದಿದ್ದಾರೆ. ಆದರೆ ಬಯಸಿದ್ದು ಮಾತ್ರ ರಾಜ್ಯಕ್ಕೆ ಅಗ್ರಸ್ಥಾನದಲ್ಲಿರಬೇಕೆಂದು. ಅದಕ್ಕಾಗಿಯೇ ಅವರು ಹಗಲಿರುಳು ಕಷ್ಟಪಟ್ಟು ಓದಿದ್ದಾರೆ. ಆದರೆ ಪರೀಕ್ಷಾ ಫಲಿತಾಂಶ ಅವರನ್ನು ಖಿನ್ನತೆಗೆ ಒಳಗಾಗವಂತೆ ಮಾಡಿದೆ.
ಇದರಿಂದಾಗಿ ಭಾನುವಾರ ಬೆಳಗ್ಗೆ ಎಂದಿನಂತೆ ಮಹಮ್ಮದಾಬಾದ್ ಕೋಚಿಂಗ್ ಸೆಂಟರ್ನಿಂದ ಗರಿಮಾ ಹೊರಗೆ ಬಂದು ಶಾರದಾ ಸಹಾಯಕ ಕಾಲುವೆಗೆ ಹಾರಿದ್ದಾಳೆ. ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ದಾರಿಹೋಕರೊಬ್ಬರು ರಸ್ತೆಬದಿ ಬಿದ್ದಿದ್ದ ಸೈಕಲ್ ಹಾಗೂ ಬ್ಯಾಗ್ ನೋಡಿ ಅದನ್ನು ಪರಿಶೀಲಿಸಿ ಅದರಲ್ಲಿ ಬರೆದಿದ್ದ ಮೊಬೈಲ್ ನಂಬರ್ ಸಹಾಯದಿಂದ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.
ವಿದ್ಯಾರ್ಥಿಯ ಬ್ಯಾಗ್‌ನಿಂದ ಸೂಸೈಡ್ ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ 'ಸಾರಿ ಮಮ್ಮಿ-ಸಾರಿ ಪಾಪಾ' ಎಂದು ಬರೆದಿರುವ ವಿದ್ಯಾರ್ಥಿನಿ ನನ್ನ ಸ್ವಂತ ಇಚ್ಛಾಶಕ್ತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ವಿದ್ಯಾರ್ಥಿ ಜೀವನದಿಂದ ಬೇಸತ್ತಿದ್ದೇನೆ. ಕ್ಷಮಿಸಿ ತಾಯಿ, ಕ್ಷಮಿಸಿ ಅಪ್ಪಾ! ತಪ್ಪಾಗಿದೆ. ನನ್ನಿಂದ ಬದುಕಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದಾಳೆ.
ಓದಿ:ವಿಷಾಹಾರ ಸೇವನೆ: ಕುಟುಂಬದ ಇಬ್ಬರು ಮಕ್ಕಳ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ