ದೆಹಲಿ :ವೀಲ್ ಚೇರ್ನಲ್ಲಿ ರೆಸ್ಟೋರೆಂಟ್‌ಗೆ ತೆರಳಿದ ಯುವತಿಗೆ ಪ್ರವೇಶ ನಿರಾಕರಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಘಟನೆ ಬಗ್ಗೆ ರಾಸ್ತಾ-ದಿ ಕೆರಿಬಿಯನ್ ಲೌಂಜ್‌ನ ಸಂಸ್ಥಾಪಕ ಪಾಲುದಾರ ಗೌಮ್ತೇಶ್ ಸಿಂಗ್ ಭಾನುವಾರ ವಿಷಾದ ವ್ಯಕ್ತಪಡಿಸಿದ್ದಾರೆ.
ಸೃಷ್ಟಿ ಪಾಂಡೆ ಎಂಬ ಯುವತಿ ಕಳೆದ ಶುಕ್ರವಾರ ಗುರ್ಗಾಂವ್ ರೆಸ್ಟೋರೆಂಟ್‌ಗೆ ವೀಲ್ಚೇರ್ ಮೂಲಕ ತೆರಳಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ ಪ್ರವೇಶಕ್ಕೆ ಅವಕಾಶವನ್ನು ನೀಡಿಲ್ಲ. ರೆಸ್ಟೋರೆಂಟ್ನಲ್ಲಿದ್ದ ಇತರ ಗ್ರಾಹಕರಿಗೆ ತೊಂದರೆಯಾಗಬಹುದು ಎಂದು ಹೇಳಿ ಒಳಗೆ ಟೇಬಲ್ ನಿರಾಕರಿಸಿದ್ದಾರೆ.
ಈ ಘಟನೆಯಿಂದ ಆಘಾತಕ್ಕೊಳಗಾದ ಸೃಷ್ಟಿ, ಮರುದಿನ ಟ್ವೀಟ್ ಮಾಡಿದ್ದು, ಬಹಳ ಸಮಯದ ನಂತರ ತನ್ನ ಆತ್ಮೀಯ ಸ್ನೇಹಿತ ಮತ್ತು ತನ್ನ ಕುಟುಂಬದೊಂದಿಗೆ ಔಟಿಂಗ್‌ಗೆ ಹೋಗಿ ಮೋಜು ಮಾಡಲು ಬಯಸಿದ್ದೆ.
ಕುಟುಂಬದ ಸದಸ್ಯರಲ್ಲಿ ಒಬ್ಬರು ನಾಲ್ಕು ಜನರಿಗೆ ಟೇಬಲ್ ಕೇಳಿದರು. ಆದರೆ, ಡೆಸ್ಕ್‌ನಲ್ಲಿರುವ ಸಿಬ್ಬಂದಿ ಎರಡು ಬಾರಿ ನಿರ್ಲಕ್ಷಿಸಿದರು ಎಂದು ಸೃಷ್ಟಿ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.
ಮೂರನೇ ಬಾರಿ ಟೇಬಲ್ ಕೇಳಿದಾಗ, ವ್ಹೀಲ್‌ಚೇರ್‌ನಿಂದ ಗ್ರಾಹಕರಿಗೆ ತೊಂದರೆಯಾಗಬಹುದು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೇ, ಅವರ ಜೊತೆಗಿದ್ದವರಿಗೂ ಅನುಮತಿ ನೀಡಿಲ್ಲ. ನಂತರ ಅವರಿಗೆ ಹೊರಗಡೆಯೇ ಟೇಬಲ್ ನೀಡಿದ್ದಾರೆ.
ಈ ವೇಳೆ ಸೃಷ್ಠಿ ಅವರು, ಎಲ್ಲರಿಂದ ಪ್ರತ್ಯೇಕಿಸಿ ನಾವು ಹೊರಗೆ ಏಕೆ ಕುಳಿತುಕೊಳ್ಳಬೇಕು? ಎಂದು ಪ್ರಶ್ನಿಸಿದ್ದಾರೆ. ಅಂತಿಮವಾಗಿ ಭಾನುವಾರ ಗೌಮ್ತೇಶ್ ಅವರು ಈ ಘಟನೆ ಮತ್ತೆಂದೂ ಸಂಭವಿಸದಂತೆ ನೋಡಿಕೊಳ್ಳಲು ಸಿಬ್ಬಂದಿಯಲ್ಲಿ 'ಸೂಕ್ಷ್ಮತೆ ಮತ್ತು ಸಹಾನುಭೂತಿ ಹೆಚ್ಚಿಸಲು ಆಂತರಿಕವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ' ಎಂದು ಹೇಳಿದರು.
ಈ ಮಧ್ಯೆ ಘಟನೆ ಬಗ್ಗೆ ಕ್ಷಮೆಯಾಚಿಸಲು ರೆಸ್ಟೋರೆಂಟ್‌ನಿಂದ ಯಾರೂ ತನ್ನೊಂದಿಗೆ ಸಂಪರ್ಕಕ್ಕೆ ಬಂದಿಲ್ಲ ಎಂದು ಸೃಷ್ಟಿ ಹೇಳಿದ್ದಾರೆ. ದೆಹಲಿ ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಸೃಷ್ಟಿ, ಜನರಲ್ಲಿ ಅಂಗವಿಕಲರ ಬಗ್ಗೆ ಯಾವುದೇ ಸೂಕ್ಷ್ಮತೆ ಮತ್ತು ಕಾಳಜಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಓದಿ:ಮೋದಿ ಯುಗದಲ್ಲಿ ರೂ. 5,35,000 ಕೋಟಿ ಬ್ಯಾಂಕ್ ವಂಚನೆ : ರಾಹುಲ್ ಗಾಂಧಿ ವ್ಯಂಗ್ಯ