ಹಜಾರಿಬಾಗ್(ಜಾರ್ಖಂಡ್): ವಿವಿಧ ಕಾರಣಕ್ಕಾಗಿ ಜಾಹೀರಾತು ಹೊರಡಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಆದರೆ, ಇಲ್ಲೋರ್ವ ಯುವತಿ ಮದುವೆಗೋಸ್ಕರ ಸೂಕ್ತ ಹುಡುಗನ ಹುಡುಕಾಟದಲ್ಲಿದ್ದು, ಅದಕ್ಕೋಸ್ಕರ ಜಾಹೀರಾತು ಹೊರಡಿಸಿದ್ದಾಳೆ. ಜಾರ್ಖಂಡ್ನ ಹಜಾರಿಬಾಗ್ನಲ್ಲಿ ಈ ವಿಭಿನ್ನ ಘಟನೆ ಬೆಳಕಿಗೆ ಬಂದಿದೆ. ಖುದ್ದಾಗಿ ಜಾಹೀರಾತು ಹೊರಡಿಸಿರುವ ಯುವತಿ, ಹಜಾರಿಬಾಗ್ನ ದೇವಸ್ಥಾನದ ಮುಖ್ಯದ್ವಾರದ ಗೋಡೆಗಳಿಗೆ ಅಂಟಿಸಿದ್ದಾಳೆ.
ಸೂಕ್ತ ಹುಡುಗನ ಹುಡುಕಾಟ: ಜಾಹೀರಾತನ್ನು ದೇವಸ್ಥಾನದ ಗೋಡೆಗಳಿಗೆ ಅಂಟಿಸಿದ ಯುವತಿ! - ಜಾಹೀರಾತು ಹೊರಡಿಸಿ ಗೋಡೆಗಳಿಗೆ ಅಂಟಿಸಿದ ಯುವತಿ
ಸೂಕ್ತ ಹುಡುಗನ ಹುಡುಕಾಟದಲ್ಲಿರುವ ಯುವತಿಯೋರ್ವಳು ಜಾಹೀರಾತು ಹೊರಡಿಸಿದ್ದು, ಅದನ್ನ ದೇವಸ್ಥಾನದ ಗೋಡೆಗೆ ಅಂಟಿಸಿದ್ದಾರೆ.
ಜಾಹೀರಾತಿನಲ್ಲಿ ಬರೆದಿರುವುದು ಏನು?: ನನ್ನ ಹೆಸರು ಸುಶ್ಮಿತಾ ದೇವ್. ನಾನು ಹಜಾರಿಬಾಗ್ನ ವಿಷ್ಣುಪುರಿ ಗಲ್ಲಿ ನಂಬರ್ 4ರಲ್ಲಿ ವಾಸವಾಗಿದ್ದೇನೆ. ನನಗೋಸ್ಕರ ಉತ್ತಮ ಹುಡುಗನ ಹುಡಕಾಟದಲ್ಲಿದ್ದು, ಆತನೊಂದಿಗೆ ಮದುವೆ ಮಾಡಿಕೊಳ್ಳುವ ಇರಾದೆ ಇದೆ. ಹತ್ತಿರದಲ್ಲಿ ವಾಸವಾಗಿರುವ, ಉತ್ತಮ ಕೆಲಸದಲ್ಲಿರುವ 30ರಿಂದ 40 ವಯಸ್ಸಿನೊಳಗಿನವರು ಸಂಪರ್ಕಿಸಬಹುದು. ಬಂಗಾಳಿ ಅಥವಾ ಇತರೆ ವರ್ಗದವರಾಗಿದ್ದರೂ ತೊಂದರೆ ಇಲ್ಲ. ಇಂತಹ ಯುವಕರ ಬಗ್ಗೆ ಮಾಹಿತಿ ಗೊತ್ತಿದ್ದರೆ, ಅಥವಾ ಯಾರಾದರೂ ಇದ್ದರೆ, ಈ ವಿಳಾಸಕ್ಕೆ ಬರಬಹುದು ಅಥವಾ ಮೊಬೈಲ್ ನಂಬರ್ಗಳಿಗೆ ಕರೆ ಮಾಡಬಹುದು ಎಂದು ಬರೆಯಲಾಗಿದೆ. ಹುಡುಗನಲ್ಲಿ ಯಾವುದೇ ರೀತಿಯ ದುರಾಸೆ ಅಥವಾ ಅಪ್ರಮಾಣಿಕತೆ ಇರಬಾರದು ಎಂದು ಹುಡುಗಿ ಷರತ್ತು ಹಾಕಿದ್ದಾಳೆ.
ಹಜಾರಿಬಾಗ್ನ ಬಂಗಾಳಿ ದುರ್ಗಾ ದೇವಸ್ಥಾನದಲ್ಲಿ ಮೇಲಿಂದ ಮೇಲೆ ಮದುವೆ ಕಾರ್ಯಕ್ರಮ ನಡೆಯುತ್ತಿರುತ್ತವೆ. ಈ ಸ್ಥಳದ ಮುಖ್ಯ ಪ್ರವೇಶ ದ್ವಾರದ ಗೋಡೆ ಮೇಲೆ ಈ ಪೋಸ್ಟರ್ ಅಂಟಿಸಲಾಗಿದೆ. ವಿಭಿನ್ನ ಜಾಹೀರಾತುವಿನ ಫೋಟೋ ಸದ್ಯ ಹಜಾರಿಬಾಗ್ನಲ್ಲಿ ಚರ್ಚೆಯ ವಿಷಯವಾಗಿದ್ದು, ಅನೇಕರು ಇದನ್ನ ವೈರಲ್ ಮಾಡ್ತಿದ್ದಾರೆ.