ಕರ್ನಾಟಕ

karnataka

ETV Bharat / bharat

ಮಗಳ ಮೇಲೆ ಕಾಮುಕ ತಂದೆಯಿಂದಲೇ ಅತ್ಯಾಚಾರ, ಗರ್ಭಿಣಿಯಾದ ಬಾಲಕಿ - ಹೆತ್ತ ಮಗಳ ಮೇಲೆ ಕಾಮುಕ ತಂದೆಯಿಂದ ರೇಪ್​

ಮಗಳ ಮೇಲೆ ತಂದೆ ನಿರಂತರವಾಗಿ ಅತ್ಯಾಚಾರವೆಸಗಿರುವ ಪರಿಣಾಮ ಆಕೆ ಗರ್ಭಿಣಿಯಾಗಿರುವ ಪ್ರಕರಣ ವಿಕಾರಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

Girl gets pregnant
Girl gets pregnant

By

Published : Nov 25, 2021, 3:52 PM IST

ವಿಕಾರಾಬಾದ್ ​(ತೆಲಂಗಾಣ): ಕಾಮುಕ ತಂದೆಯೋರ್ವ ತಾನು ಜನ್ಮ ನೀಡಿದ ಮಗಳ ಮೇಲೆಯೇ ಮೂರು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಬಾಲಕಿ ಗರ್ಭಿಣಿಯಾಗಿರುವ ಘಟನೆ ತೆಲಂಗಾಣದ ವಿಕಾರಾಬಾದ್​​ನ ಮೊಮಿನ್​​ಪೇಟ್​​​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿವರ:

ಸಂತ್ರಸ್ತೆಯ ಪೋಷಕರು ಸಂಗಾರೆಡ್ಡಿಯ ಪತಂಚೆರುವುದಲ್ಲಿ ವಾಸವಾಗಿದ್ದರು. ಬಾಲಕಿ ಕಸ್ತೂರಿ ಬಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕೆಲ ತಿಂಗಳ ಹಿಂದೆ ಕೋವಿಡ್‌ ಲಾಕ್​ಡೌನ್​ ಆಗಿದ್ದ ಕಾರಣ ಪೋಷಕರೊಂದಿಗೆ ಉಳಿದುಕೊಳ್ಳಲು ಆಗಮಿಸಿದ್ದಾಳೆ. ಲಾಕ್​ಡೌನ್​ ತೆರವುಗೊಂಡ ಬಳಿಕ ಕೂಡ ಅವರೊಂದಿಗೆ ಇದ್ದಳು. ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದ ಬಾಲಕಿಯ ತಂದೆ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬರುತ್ತಿದ್ದ. ಆದ್ರೆ, ಒಂದಿನ ಮಗಳು ಮನೆಯಲ್ಲಿ ಒಬ್ಬಳೇ ಇರುವುದನ್ನು ಕಂಡಿರುವ ಆತ ಅತ್ಯಾಚಾರವೆಸಗಿದ್ದಾಳೆ. ಇದಾದ ಬಳಿಕ ಆಕೆಗೆ ಪ್ರಾಣ ಬೆದರಿಕೆ ಹಾಕಿ ದುಷ್ಕೃತ್ಯ ಮುಂದುವರೆಸಿದ್ದಾನೆ.

ಇದನ್ನೂ ಓದಿ:ಚಲಿಸುತ್ತಿರುವ ರೈಲಿನಲ್ಲಿ ಶಾಲಾ ಬಾಲಕಿ ಡೇಂಜರಸ್ ಸ್ಟಂಟ್ - ವಿಡಿಯೋ ವೈರಲ್​​

ಕಳೆದ ಕೆಲ ದಿನಗಳ ಹಿಂದೆ ಬಾಲಕಿಯ ಅಜ್ಜಿ ತೀರಿಕೊಂಡಿರುವ ಕಾರಣ ವಿಕಾರಾಬಾದ್​​ ಜಿಲ್ಲೆಯ ಮೊಮಿನ್​ಪೇಟೆಗೆ ತೆರಳಿದ್ದಳು. ಈ ವೇಳೆ ಜ್ವರದಿಂದ ಬಳಲುತ್ತಿದ್ದ ಮಗಳನ್ನು ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಬಾಲಕಿ ಗರ್ಭಿಣಿಯಾಗಿರುವ ಮಾಹಿತಿ ತಿಳಿದುಬಂದಿದೆ.

ಈ ಸಂಗತಿ ತಿಳಿಯುತ್ತಿದ್ದಂತೆ ತಾಯಿಗೆ ಆಘಾತವಾಗಿದ್ದು, ಮಗಳನ್ನು ಪ್ರಶ್ನಿಸಿದ್ದಾಳೆ. ಈ ವೇಳೆ ತಂದೆ ಎಸಗಿರುವ ದೌರ್ಜನ್ಯವನ್ನು ವಿವರಿಸಿದ್ದಾಳೆ. ಮನನೊಂದ ತಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.

ABOUT THE AUTHOR

...view details