ಪಾಲ್ವಾಲ್:ಹರಿಯಾಣದ ಪಾಲ್ವಾಲ್ ಜಿಲ್ಲೆಯಲ್ಲಿ ಅತ್ಯಂತ ಹೇಯ, ಅಮಾನವೀಯ ಘಟನೆಯೊಂದು ಜರುಗಿದೆ. ಯುವತಿಯೋರ್ವಳ ಮೇಲೆ 25 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಫೇಸ್‌ಬುಕ್ ಫ್ರೆಂಡ್ ಭೇಟಿಗೆ ತೆರಳಿದ ಯುವತಿಯ ಮೇಲೆ 25 ಜನರಿಂದ ಅತ್ಯಾಚಾರ - पलवल 25 लोग लड़की गैंगरेप
ಹರಿಯಾಣದಲ್ಲಿ ಯುವತಿಯನ್ನು ಅಪಹರಿಸಿ 25 ಜನರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಹರಿಯಾಣದಲ್ಲಿ 25 ಜನರಿಂದ ಯುವತಿಯ ಮೇಲೆ ಅತ್ಯಾಚಾರ
ಯುವತಿಯು ಫೇಸ್‌ಬುಕ್‌ನಲ್ಲಿ ಪರಿಚಯನಾದ ಯುವಕನನ್ನು ಭೇಟಿಯಾಗಲು ತೆರಳಿದ್ದಾಳೆ. ಈ ವೇಳೆ ಕಾಮಪಿಪಾಸುಗಳು ಆಕೆಯನ್ನು ಅಪಹರಿಸಿ ಅಲ್ಲಿನ ರಾಮಗಢವೆಂಬ ಪ್ರದೇಶದ ಅರಣ್ಯಕ್ಕೆ ಕರೆದೊಯ್ದಿದ್ದಾರೆ. ಬಳಿಕ ರಾತ್ರಿಯಿಡೀ ಕಾಡಿನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.