ಕರ್ನಾಟಕ

karnataka

ETV Bharat / bharat

ವಿದ್ಯುತ್​ ತಗುಲಿ ಪ್ರಾಣಬಿಟ್ಟ ಲವರ್​.. ಮನನೊಂದು ಆತ್ಮಹತ್ಯೆಗೆ ಶರಣಾದ ಪ್ರಿಯತಮೆ - ವಿದ್ಯುತ್​ ತಗುಲಿ ಪ್ರಾಣಬಿಟ್ಟ ಲವರ್​​

ಲವರ್​ ಸಾವನ್ನಪ್ಪಿದ್ದರಿಂದ ಮನನೊಂದ ಯುವತಿಯೊಬ್ಬಳು ವಿಷ ಸೇವನೆ ಮಾಡಿ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

GIRL FRIEND SUICIDE
GIRL FRIEND SUICIDE

By

Published : Aug 14, 2021, 4:54 PM IST

ನೆಲ್ಲೂರು(ತೆಲಂಗಾಣ): ವಿದ್ಯುತ್​ ತಗುಲಿ ಪ್ರಾಣಕಳೆದುಕೊಂಡ ಗೆಳೆಯನ ಸಾವು ಸಹಿಸಲಾರದೇ ಆತನ ಪ್ರಿಯತಮೆ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲ್ಲೂರಿನಲ್ಲಿ ನಡೆದಿದೆ.

ತೆಲಂಗಾಣದ ನೆಲ್ಲೂರು ಜಿಲ್ಲೆಯ ಕೊಡವಲೂರು ಹಳ್ಳಿಯಲ್ಲಿ ಈ ದುರಂತ ನಡೆದಿದೆ. ಶ್ರೀಕಾಂತ್ ಕಳೆದ ಕೆಲ ದಿನಗಳಿಂದ ಸೌಮ್ಯ ಎಂಬ ಹುಡುಗಿಯನ್ನ ಪ್ರೀತಿಸುತ್ತಿದ್ದನು. ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಆದರೆ, ನಿನ್ನೆ ಆತ್ಮಕೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀಕಾಂತ್​ಗೆ ವಿದ್ಯುತ್​ ಶಾಕ್​ ಹೊಡೆದಿದೆ.ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿರಿ: ಸ್ವಾತಂತ್ರ್ಯೋತ್ಸವ: ಶೌರ್ಯ ಮೆರೆದ ಯೋಧರಿಗೆ ಅಶೋಕ್​, ಕೀರ್ತಿ, ಶೌರ್ಯ ಚಕ್ರ ಘೋಷಣೆ

ಇತನ ಸಾವಿನ ಸುದ್ದಿ ಕೇಳಿ ಮನನೊಂದಿರುವ ಗೆಳತಿ ಸೌಮ್ಯ ಮಧ್ಯರಾತ್ರಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಸಾವನ್ನಪ್ಪಿರುವುದು ಎರಡು ಕುಟುಂಬದಲ್ಲಿ ಆಘಾತ ಮೂಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ABOUT THE AUTHOR

...view details