ಪ್ರಕಾಶಂ (ಆಂಧ್ರಪ್ರದೇಶ):ವಿವಾಹೇತರ ಸಂಬಂಧ ಹೊಂದಿದ್ದ 60 ವರ್ಷದ ವೃದ್ಧನ ಮರ್ಮಾಂಗವನ್ನು ಮಹಿಳೆಯೊಬ್ಬರು ಕತ್ತರಿಸಿದ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಕೊಂಡಪಿ ಮಂಡಲದಲ್ಲಿ 60 ವರ್ಷದ ವ್ಯಕ್ತಿಯೊಬ್ಬ 55 ವರ್ಷದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಅಂತೆಯೇ, ಈತ ತನ್ನ ಗೆಳತಿಯ ಮನೆಗೆ ಹೋದಾಗ ಆಕೆ ಬ್ಲೇಡ್‌ನಿಂದ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಈ ವಿವಾಹೇತರ ಸಂಬಂಧ ಆತನ ಪ್ರಾಣವನ್ನೇ ತೆಗೆದಿದೆ.