ಕರ್ನಾಟಕ

karnataka

ETV Bharat / bharat

ಸೆಲ್ಫಿ ಕ್ಲಿಕ್ಕಿಸುವಾಗ ಕಾಲು ಜಾರಿ 50 ಅಡಿ ಬಾವಿಗೆ ಬಿದ್ದ ಯುವತಿ - ಮುಂದೇನಾಯ್ತು!? - 50 ಅಡಿ ಬಾವಿಗೆ ಬಿದ್ದ ಹುಡುಗಿ

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಯುವತಿಯೋರ್ವಳು ಆಳದ ಬಾವಿಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದಿದೆ. ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

Girl falls in a well
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾವಿಗೆ ಬಿದ್ದ ಯುವತಿ

By

Published : Feb 20, 2021, 12:19 PM IST

Updated : Feb 20, 2021, 12:28 PM IST

ರತ್ಲಂ/ಮಧ್ಯಪ್ರದೇಶ:ಬಾವಿಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವತಿವೋರ್ವಳು ಆಯತಪ್ಪಿ ಸುಮಾರು 50 ಅಡಿ ಆಳದ ಬಾವಿಗೆ ಬಿದ್ದ ಘಟನೆ ರತ್ಲಂ ಜಿಲ್ಲೆಯ ಸುಖೇಡಾ ಗ್ರಾಮದಲ್ಲಿ ನಡೆದಿದೆ.

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾವಿಗೆ ಬಿದ್ದ ಯುವತಿ

ಬಾವಿಯೊಳಗಿಂದ ಯುವತಿಯ ಕಿರುಚಾಟ ಕೇಳಿ , ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಯುವಕನೊಬ್ಬ ಆಕೆಯನ್ನು ಉಳಿಸಲು ಬಾವಿಗೆ ಹಾರಿ ಆತನೂ ಇ್ಕಕಟ್ಟಿಗೆ ಸಿಲುಕಿದ್ದ.

ಸುಜಾಪುರ ದೇವಸ್ಥಾನ ನೋಡಲೆಂದು ಬಂದಿದ್ದ ಯುವತಿ ಪೂಜೆ ಮುಗಿಸಿ, ಪಕ್ಕದಲ್ಲಿಯೇ ಇದ್ದ ಬಾವಿಯ ಬಳಿ ಸೆಲ್ಫಿ ತೆಗೆದುಕೊಳ್ಳಲಿ ಹೋದಾಗ ಕಾಲುಜಾರಿ ಬಾವಿಗೆ ಬಿದ್ದಿದ್ದಾಳೆ. ಯುವತಿಯನ್ನ ರಕ್ಷಿಸಲು ಬಾವಿಗೆ ಹಾರಿದ ಯುವಕ ಮೇಲೆಳಲಾಗದೇ ಒದ್ದಾಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಹಗ್ಗದ ಮೂಲಕ ಹರಸಾಹನ ಪಟ್ಟು ಇಬ್ಬರನ್ನೂ ಸುರಕ್ಷಿತವಾಗಿ ಬಾವಿಯಿಂದ ಮೇಲೆತ್ತಿದ್ದಾರೆ.

ಇದನ್ನೂ ಓದಿ:ಟೂಲ್​ಕಿಟ್ ಕೇಸ್​: ಮಾನವ ಹಕ್ಕು ಪ್ರತಿಪಾದಿಸಿ ದಿಶಾಗೆ ಬೆಂಬಲ ವ್ಯಕ್ತಪಡಿಸಿದ ಗ್ರೆಟಾ ಥನ್​ಬರ್ಗ್

Last Updated : Feb 20, 2021, 12:28 PM IST

ABOUT THE AUTHOR

...view details