ಧುಲೆ, ಮಹಾರಾಷ್ಟ್ರ:ತೊಟ್ಟಿಲಲ್ಲಿ ಮಲಗಿದ್ದ ಮಗುವೊಂದು ಅಲ್ಲಿಂದ ಉರುಳಿ ಕೆಳಗಿದ್ದ ಬಿಸಿ ಚಹಾದ ಪಾತ್ರೆಗೆ ಬಿದ್ದು ತೀವ್ರವಾಗಿ ಸುಟ್ಟು ಗಾಯಗೊಂಡು ಮೃತಪಟ್ಟಿದೆ. ಈ ಮನಕಲುಕುವ ಘಟನೆ ಮಹಾರಾಷ್ಟ್ರದ ಧುಲೆಯಲ್ಲಿ ಇಂದು ನಡೆದಿದೆ.
1 ವರ್ಷದ ಹೆಣ್ಣು ಮಗು ಮೃತಪಟ್ಟ ದುರ್ದೈವಿ. ಮನೆಯಲ್ಲಿ ತೊಟ್ಟಿಲು ಕಟ್ಟಿ ಮಗುವನ್ನು ಮಲಗಿಸಲಾಗಿತ್ತು. ತೊಟ್ಟಿಲ ಅಡಿಯಿದ್ದ ಬಿಸಿ ಚಹಾದ ಪಾತ್ರೆಯಲ್ಲಿ ಮಗು ಉರುಳಿ ಬಿದ್ದಿದೆ. ಇದರಿಂದ ಹಸುಳೆಯ ಮೃದು ದೇಹ ಚಹಾದ ಬಿಸಿಗೆ ಸುಟ್ಟು ಹೋಗಿದೆ. ಇದನ್ನು ಕಂಡವರು ತಕ್ಷಣವೇ ಮಗುವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರ ಸುಟ್ಟು ಗಾಯಗೊಂಡಿದ್ದ ಹಸುಳೆ ಚಿಕಿತ್ಸೆ ವೇಳೆ ಮೃತಪಟ್ಟಿದೆ.