ಕಾಂಚೀಪುರಂ(ತಮಿಳುನಾಡು): ಬಾಯಾರಿದ ಬಾಲಕಿಯೊಬ್ಬಳುನೀರೆಂದು ತಿಳಿದುಕೊಂಡು ಸೀಮೆಎಣ್ಣೆ ಸೇವಿಸಿ ಮೃತಪಟ್ಟಿದ್ದಾಳೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಪಲ್ಲವರ್ ಮೇಡು ಗ್ರಾಮದಲ್ಲಿ ಘಟನೆ ನಡೆದಿದೆ.
ಬಾಯಾರಿದ ಬಾಲಕಿ ನೀರೆಂದು ಸೀಮೆಎಣ್ಣೆ ಕುಡಿದು ಸಾವು - ಈಟಿವಿ ಭಾರತ ಕರ್ನಾಟಕ
ನೀರು ಎಂದು ಭಾವಿಸಿ ಸೀಮೆಎಣ್ಣೆ ಕುಡಿದ ಬಾಲಕಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
girl died after drinking kerosene
ಕಳೆದ ಶುಕ್ರವಾರ ರಾಜೇಂದ್ರನ್ ಎಂಬುವವರ 6 ವರ್ಷದ ಮಗಳು ಕಾರ್ತಿಕ ಮನೆಯಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ನೀರಿನ ಬಾಟಲಿಯಲ್ಲಿ ತುಂಬಿಟ್ಟಿದ್ದ ಸೀಮೆಎಣ್ಣೆ ಕುಡಿದಿದ್ದಾಳೆ. ಕೆಲ ಹೊತ್ತು ಕಳೆಯುತ್ತಿದ್ದಂತೆ ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಚಿಕಿತ್ಸೆಗೋಸ್ಕರ ಕಾಂಚೀಪುರಂ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಚೆಂಗಲಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ನಾಲ್ಕು ದಿನಗಳ ಕಾಲ ಚಿಕಿತ್ಸೆ ಪಡೆದ ಬಾಲಕಿ ಕೊನೆಗೂ ಬದುಕುಳಿಯಲಿಲ್ಲ.