ಪೂರ್ಣಿಯಾ (ಬಿಹಾರ):ಬಿಹಾರದ ಪೂರ್ಣಿಯಾ ಜಿಲ್ಲೆಯ ಹಳ್ಳಿವೊಂದರಲ್ಲಿ ನಡೆಯುವ ಜಾತ್ರೆಯೊಂದು ವಿಶಿಷ್ಟವಾಗಿದ್ದು, ಇಲ್ಲಿ ಯುವಕ-ಯುವತಿಯರಿಗೆ ತಮ್ಮ ಬಾಳಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ಇರುತ್ತದೆ. 'ಪೂರ್ಣಿಯಾ ಕಾ ಪಟ್ಟ ಮೇಳ' ಎಂಬ ಹೆಸರಿನಲ್ಲಿ ಈ ಜಾತ್ರೆ ನಡೆಯುತ್ತದೆ. ಇದರಲ್ಲಿ ಹೆಚ್ಚಾಗಿ ಬುಡಕಟ್ಟು ಸಮುದಾಯದ ಜನರೇ ಭಾಗಿಯಾಗ್ತಾರೆ.
ಸುಮಾರು 100 ವರ್ಷಗಳ ಇತಿಹಾಸ ಇರುವ ಈ ಜಾತ್ರೆ ಎರಡು ದಿನಗಳ ಕಾಲ ನಡೆಯುತ್ತದೆ. ಪುರಾತನ ಕಾಲದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗೆ ಇರಲಿಲ್ಲ. ಆದರೆ, ಈ ಜಾತ್ರೆಯಲ್ಲಿ ಬುಡಕಟ್ಟು ಸಮುದಾಯದ ಯುವತಿಯರು ತಮ್ಮಿಷ್ಟದ ಯುವಕನನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಇದರಲ್ಲಿ ನೇಪಾಳ, ಜಾರ್ಖಂಡ್, ಬಂಗಾಳ, ಒಡಿಶಾ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ಬುಡಕಟ್ಟು ಜನಾಂಗದ ಯುವಕರು ಆಗಮಿಸುತ್ತಾರೆ.