ಪ್ರಯಾಗ್‌ರಾಜ್(ಉತ್ತರಪ್ರದೇಶ): ಪ್ರೀತಿ ಅಂದ್ರೆನೇ ಹಾಗೆ, ಏನೂ ಬೇಕಾದರೂ ಮಾಡಿಸಿಬಿಡುತ್ತದೆ. ಆದರೆ ಈ ಪರಿಯನ್ನು ಯಾರೂ ಊಹಿಸಲಸಾಧ್ಯ. ಇಲ್ಲೊಬ್ಬಳು ಯುವತಿ ಪ್ರೀತಿಸಿದವಳನ್ನು ಮದುವೆಯಾಗಲು ತನ್ನ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾಳೆ.!
ಪ್ರಕರಣದ ವಿವರ: ನಾಲ್ಕು ತಿಂಗಳ ಹಿಂದೆ ಎಸ್‌ಆರ್‌ಎನ್ ಆಸ್ಪತ್ರೆಯಲ್ಲಿ ಯುವತಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೇಹದ ಮೇಲ್ಭಾಗವನ್ನು ಬದಲಾಯಿಸಿಕೊಂಡಿದ್ದಾಳೆ. ಇತ್ತೀಚೆಗೆ ಮಹಿಳಾ ಮತ್ತು ಪ್ರಸೂತಿ ವಿಭಾಗದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಆಕೆಯ ಗರ್ಭಕೋಶವನ್ನೂ ತೆಗೆಯಲಾಗಿದೆಯಂತೆ. ಕೆಲವು ತಿಂಗಳ ನಂತರ ಆಕೆಗೆ ಅಂತಿಮ ಶಸ್ತ್ರಚಿಕಿತ್ಸೆ ಮಾಡಲಾಗುವುದು, ಇದರಲ್ಲಿ ಆಕೆಯ ದೇಹದ ಲೈಂಗಿಕ ಭಾಗವೂ ಬದಲಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಒಂದೂವರೆ ವರ್ಷಗಳ ನಂತರ ಆಕೆ ಸಂಪೂರ್ಣವಾಗಿ ಪುರುಷಳಾಗುತ್ತಾಳೆ ಎಂದು ಅವರು ವಿವರಿಸಿದ್ದಾರೆ. ಈ ರೀತಿಯ ಲಿಂಗ ಬದಲಾವಣೆ ರಾಜ್ಯದಲ್ಲಿ ಇದು ಎರಡನೇ ಪ್ರಕರಣ. ಇದಕ್ಕೂ ಮುನ್ನ ಮೀರತ್‌ನಲ್ಲಿ ಬಾಲಕಿಯೊಬ್ಬಳು ಲಿಂಗ ಬದಲಾಯಿಸಿಕೊಂಡಿದ್ದಳು.
ಫಾಫಮೌ ನಿವಾಸಿಯಾಗಿರುವ 20 ವರ್ಷದ ಬಿಎ ವಿದ್ಯಾರ್ಥಿನಿ ಆಕೆಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ಪೋಷಕರಿಗೆ ತಿಳಿಸಿ ಮದುವೆಯಾಗಿ ಜೀವನ ಕಳೆಯುವ ಆಸೆ ವ್ಯಕ್ತಪಡಿಸಿದ್ದಾಳೆ. ಆದರೆ, ಪೋಷಕರು ಯುವತಿಯ ಮನವೊಲಿಸಲು ಕಷ್ಟಪಟ್ಟಿದ್ದಾರೆ. ಕೊನೆಗೆ ವಿದ್ಯಾರ್ಥಿನಿ ಸ್ವರೂಪರಾಣಿ ನೆಹರು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ.ಮೋಹಿತ್ ಜೈನ್ ಅವರನ್ನು ಭೇಟಿ ಮಾಡಿ ತನ್ನ ಲಿಂಗವನ್ನು ಬದಲಾಯಿಸುವ ಬಯಕೆ ವ್ಯಕ್ತಪಡಿಸಿದ್ದಾಳೆ.