ಮಹಬೂಬ್‌ನಗರ(ತೆಲಂಗಾಣ):ಅನಾಥ ಮಗುವಿಗೆ ಎದೆ ಹಾಲುಣಿಸಿ ಭಿಕ್ಷುಕಿಯೊಬ್ಬಳು ತಾಯ್ತನ ಮೆರೆದಿದ್ದಾರೆ. ಈ ಘಟನೆ ತೆಲಂಗಾಣದ ಮೆಹಬೂಬ್ನಗರದಲ್ಲಿ ನಡೆದಿದೆ. ಭಿಕ್ಷುಕಿಯ ಮಹಾ ಕಾರ್ಯಕ್ಕೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದ್ದು, ತಾಯ್ತನ ತೋರಿರುವ ಮಹಿಳೆಗೆ ಸಲಾಂ ಹೇಳುತ್ತಿದ್ದಾರೆ.
ಏನಿದು ಪ್ರಕರಣ?: ಹೆತ್ತ ತಂದೆ ಕುಡಿತದ ಚಟಕ್ಕೊಳಗಾದ ಕಾರಣ ಇಬ್ಬರು ಹೆಣ್ಣು ಮಕ್ಕಳು(ಬಾಲಕಿ ಮತ್ತು ನವಜಾತ ಶಿಶು) ಅನಾಥವಾಗಿವೆ. ಗಂಡನ ಚಿತ್ರಹಿಂಸೆ ತಾಳಲಾರದೇ ತಾಯಿ ಕೂಡ ಮಕ್ಕಳನ್ನ ಬಿಟ್ಟು ಹೊರಟು ಹೋಗಿದ್ದಾರೆ. ಹೀಗಾಗಿ, ವಯಸ್ಸಿನಲ್ಲಿ ಸ್ವಲ್ಪ ದೊಡ್ಡವಳಾಗಿರುವ ಬಾಲಕಿಗೆ ಪುಟ್ಟ ತಂಗಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಬಿದ್ದಿದೆ. ಇದೇ ಕಾರಣಕ್ಕಾಗಿ ಆಕೆ ಭಿಕ್ಷೆ ಬೇಡುವ ಕೆಲಸ ಮಾಡಲು ಮುಂದಾಗಿದ್ದಾಳೆ.
ನವಜಾತ ಶಿಶುವಿಗೋಸ್ಕರ ಭಿಕ್ಷೆ ಬೇಡುತ್ತಿರುವ ಬಾಲಕಿ ಇದನ್ನೂ ಓದಿ:CCTV Video: ಸೇಲಂನಲ್ಲಿ ಎರಡು ಬಸ್ಗಳ ಮಧ್ಯೆ ಭೀಕರ ಅಪಘಾತ
ನಿನ್ನೆ ಮಧ್ಯಾಹ್ನ ಸದಾಶಿವಪೇಟೆ-ಜಹೀರಾಬಾದ್ ರಸ್ತೆಯಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ಮಗು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದಳು. 'ನನ್ನ ತಂಗಿ ಹಸುವಿನಿಂದ ಅಳುತ್ತಿದ್ದಾಳೆ. ಆಕೆಗೋಸ್ಕರ ಸ್ವಲ್ಪ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾಳೆ.
ಈ ವೇಳೆ ಈಟಿವಿ ಭಾರತ್ ವರದಿಗಾರ ಬಾಲಕಿಯನ್ನ ಮಾತನಾಡಿಸಿದ್ದಾರೆ. ತನ್ನ ತಂದೆ ಕುಡಿತದ ಚಟಕ್ಕೆ ಬಿದ್ದಿರುವ ಕಥೆ ಹೇಳಿಕೊಂಡಿದ್ದಾಳೆ. ತಾವು ಸದಾಶಿವಪೇಟೆಯಲ್ಲಿ ವಾಸವಾಗಿದ್ದು, ಎರಡು ದಿನಗಳ ಹಿಂದೆ ಅಪ್ಪ - ಅಮ್ಮ ಜಗಳ ಮಾಡಿ, ಬೇರೆಡೆ ಹೋಗಿದ್ದಾರೆ. ಹೀಗಾಗಿ, ಏನು ಮಾಡಬೇಕೆಂದು ನನಗೆ ದಾರಿ ತೋಚದ ಕಾರಣ, ಆಹಾರಕ್ಕಾಗಿ ಭಿಕ್ಷೆ ಬೇಡಲು ಆರಂಭಿಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ಮಗುವಿಗೆ ಹಾಲುಣಿಸಿದ ಭಿಕ್ಷುಕಿ:ಹಸುವಿನಿಂದ ಅಳುತ್ತಿದ್ದ ಮಗುವಿನ ನೋವಿಗೆ ಸ್ಪಂದಿಸಿರುವ ಭಿಕ್ಷುಕಿ ಯಲ್ಲಮ್ಮ ಸಹಾಯ ಮಾಡಿದ್ದು, ಎದೆ ಹಾಲುಣಿಸಿದ್ದಾಳೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಈಟಿವಿ ಭಾರತ ಪ್ರತಿನಿಧಿ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಅವರು, ಮಕ್ಕಳು ಭಿಕ್ಷೆ ಬೇಡುತ್ತಿದ್ದ ಜಾಗಕ್ಕೆ ಹೋಗಿ,ಅವರನ್ನ ಶಿಶು ಗೃಹಕ್ಕೆ ಕರೆದುಕೊಂಡು ಬಂದಿದ್ದಾರೆ.