ಕರ್ನಾಟಕ

karnataka

ETV Bharat / bharat

ಮೊಹಾಲಿಯಲ್ಲಿ ಮೋಜಿನ ಜೋಕಾಲಿ ಹರಿದು ಬಿದ್ದು ಅಪಘಾತ: 6 ಜನರಿಗೆ ಗಾಯ - ಬೃಹತ್ ಮೋಜಿನ ಜೋಕಾಲಿ

ಮೋಜಿನ ಜೋಕಾಲಿಯೊಂದು ನಿಯಂತ್ರಣ ಕಳೆದುಕೊಂಡು ಸಂಭವಿಸಿದ ಅಪಘಾತದಲ್ಲಿ 6 ಜನರಿಗೆ ಗಾಯವಾಗಿದೆ. ಮೋಜಿನ ಜೋಕಾಲಿ ಸುಮಾರು 30 ಅಡಿ ಮೇಲಿನಿಂದ ನೆಲಕ್ಕೆ ಅಪ್ಪಳಿಸಿದೆ.

ಫನ್​ಫೇರ್ ಜೋಕಾಲಿ ಹರಿದು ಬಿದ್ದು ಅಪಘಾತ: 6 ಜನರಿಗೆ ಗಾಯ
Mohali Six injured as giant swing falls from 30 feet

By

Published : Sep 5, 2022, 10:56 AM IST

ಮೊಹಾಲಿ:ಇಲ್ಲಿನ 8ನೇ ಫೇಸ್ ಪ್ರದೇಶದ ದಸರಾ ಮೈದಾನದಲ್ಲಿ ಹಾಕಲಾಗಿದ್ದ ಬೃಹತ್ ಫನ್​ಫೇರ್ ಜೋಕಾಲಿಯೊಂದು ಹರಿದು ಬಿದ್ದು 6 ಜನರಿಗೆ ಗಾಯವಾದ ಘಟನೆ ಜರುಗಿದೆ. ಸಾಕಷ್ಟು ಜನರನ್ನು ಹೊತ್ತು 30 ಅಡಿ ಮೇಲೆ ತಿರುಗುತ್ತಿದ್ದ ಜೋಕಾಲಿಯು ಏಕಾಏಕಿ ಕುಸಿದು ನೆಲಕ್ಕೆ ಬಿದ್ದು ಭಾನುವಾರ ರಾತ್ರಿ ಈ ಅನಾಹುತ ಸಂಭವಿಸಿದೆ. ತಾಂತ್ರಿಕ ವೈಫಲ್ಯತೆಯಿಂದ ದುರ್ಘಟನೆ ಉಂಟಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಾಳುಗಳನ್ನು ಮೊಹಾಲಿಯ 6ನೇ ಫೇಸ್​ನಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ರಜೆ ಆಗಿದ್ದರಿಂದ ಸಹಜವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಮೋಜಿಗಾಗಿ ಕಾಲಕಳೆಯಲು ಸ್ಥಳಕ್ಕೆ ಆಗಮಿಸಿದ್ದರು. ಬೃಹತ್ ಮೋಜಿನ ಜೋಕಾಲಿ ನಿಯಂತ್ರಣ ಕಳೆದುಕೊಂಡು 30 ಅಡಿ ಮೇಲಿನಿಂದ ನೆಲಕ್ಕೆ ಅಪ್ಪಳಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ದುರ್ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಕಾಯಲಾಗುತ್ತಿದೆ.

ಓದಿ: ಸೈರಸ್ ಮಿಸ್ತ್ರಿ ರಸ್ತೆ ಅಪಘಾತ ಕೇಸ್​: ಕಾರು ಚಲಾಯಿಸುತ್ತಿದ್ದ ವೈದ್ಯೆ, ಆಕ್ಸಿಡೆಂಟ್​ಗೆ ಕಾರಣವೇನು ಗೊತ್ತಾ?

ABOUT THE AUTHOR

...view details