ಉತ್ತರಾಖಂಡ : ಉತ್ತರಾಖಂಡ ರಾಜ್ಯದ ಬಜ್ಜಲಪುರ ಗ್ರಾಮದಲ್ಲಿ ಸುಮಾರು 15 ರಿಂದ 20 ಅಡಿ ಉದ್ದದ ಹೆಬ್ಬಾವು ಆಕಳು ಕರುವನ್ನು ನುಂಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಗದ್ದನ್ನ ಮಾಡಲು ಹೋಗಿ.. ಅರ್ಧಂಬರ್ಧ ಆಕಳು ಕರು ನುಂಗಿ ಪರದಾಡಿದ ಹೆಬ್ಬಾವು.. ವಿಡಿಯೋ
ಕೆಲ ಸಮಯದ ನಂತರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇಲಾಖೆಯ ಅಧಿಕಾರುಗಳು ಹೆಬ್ಬಾವು ಬಾಯಿಂದ ಕರವನ್ನು ಹೊರ ತೆಗೆದಿದ್ದಾರೆ. ಆದರೆ, ಅಷ್ಟರೊಳಗೆ ಕರು ಸಾವನ್ನಪ್ಪಿತ್ತು. ನಂತರ ಹೆಬ್ಬಾವನ್ನ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಬಿಟ್ಟಿದ್ದಾರೆ..
ಅರ್ಧಂಬರ್ಧ ಆಕಳು ಕರು ನುಂಗಿ ಪರದಾಡಿದ ಹೆಬ್ಬಾವು
ಗ್ರಾಮದ ಹೊರ ಹೊಲಯದಲ್ಲಿ ಆಕಳು ಕರು ಮೇಯಲು ಹೋದಾಗ ಈ ದೈತ್ಯ ಹೆಬ್ಬಾವು ಕರುವನ್ನು ನುಂಗಲೆತ್ನಿಸಿದೆ. ಆದರೆ, ಹೆಬ್ಬಾವಿಗೆ ಪೂರ್ಣ ಪ್ರಮಾಣದಲ್ಲಿ ಕರುವನ್ನು ನುಂಗಲು ಸಾಧ್ಯವಾಗದೆ ಪರದಾಡಿದೆ. ಈ ದೃಶ್ಯವನ್ನು ನೋಡಲು ಭಾರೀ ಜನಸಮೂಹವೇ ಜಮಾಯಿಸಿತ್ತು.
ಕೆಲ ಸಮಯದ ನಂತರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇಲಾಖೆಯ ಅಧಿಕಾರುಗಳು ಹೆಬ್ಬಾವು ಬಾಯಿಂದ ಕರವನ್ನು ಹೊರ ತೆಗೆದಿದ್ದಾರೆ. ಆದರೆ, ಅಷ್ಟರೊಳಗೆ ಕರು ಸಾವನ್ನಪ್ಪಿತ್ತು. ನಂತರ ಹೆಬ್ಬಾವನ್ನ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಬಿಟ್ಟಿದ್ದಾರೆ.