ಥಾಣೆ: ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ಸರ್ಪಂಚ್ವೋರ್ವರು ಹೆಲಿಕಾಪ್ಟರ್ ಮೂಲಕ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನೊಂದೆಡೆ ಭಿವಾಂಡಿಯ ರೈತ 30 ಕೋಟಿ ರೂ. ನ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಈ ಎರಡು ಪ್ರತ್ಯೇಕ ಘಟನೆಗಳು ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ತೀವ್ರ ಚರ್ಚೆ.
ರೈತ ಖರೀದಿಸಿದ 30 ಕೋಟಿ ಬೆಲೆಯ ಹೆಲಿಕಾಪ್ಟರ್!
ಮಹಾರಾಷ್ಟ್ರದಲ್ಲಿ ರೈತ ಮತ್ತು ಉದ್ಯಮಿ ಜನಾರ್ದನ್ ಭೋಯಿರ್ ಎಂಬುವರು ಹೆಲಿಕಾಪ್ಟರ್ ಖರೀದಿಸಿದ್ದಾರೆ. ಅಷ್ಟೇ ಅಲ್ಲದೆ, ಡೈವ್ ಅಂಜುರ್‌ನ ಕೈಗಾರಿಕೋದ್ಯಮಿ ಅರುಣ್ ಆರ್. ಪಾಟೀಲ್ ಎಂಬುವರು ಸಹ ಭಾರತದಲ್ಲಿ ಮೊದಲ ಬಾರಿಗೆ ಕ್ಯಾಡಿಲಾಕ್ ಕಾರು ಖರೀದಿಸಿದ್ದಾರೆ. ಈ ಎರಡು ವಿಷಯಗಳು ದೇಶದ ಜನರ ಗಮನ ಸೆಳೆದಿವೆ.
ವಾಡ್ಪೆ ಎಂಬ ಹಳ್ಳಿಯ ರೈತ ಮತ್ತು ಉದ್ಯಮಿ ಜನಾರ್ದನ್ ಭೋಯಿರ್ ಎಂಬುವರು ಹೆಲಿಕಾಪ್ಟರ್ ಖರೀದಿಸಿದ್ದಾರೆ. ಭೋಯಿರ್ ಪೂರಕ ಆದಾಯಕ್ಕಾಗಿ ಡೈರಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ವ್ಯವಹಾರವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಮರ್ಸಿಡಿಸ್, ಫಾರ್ಚೂನರ್, ಬಿಎಂಡಬ್ಲ್ಯು, ರೇಂಜ್ ರೋವರ್, ಎಂಜಿ ಹೆಕ್ಟರ್ ಕಾರುಗಳನ್ನು ಖರೀದಿಸಿದ್ದಾರೆ.
ಅಷ್ಟೇ ಅಲ್ಲದೆ, ಡೈವ್ ಅಂಜುರ್‌ನ ಕೈಗಾರಿಕೋದ್ಯಮಿ ಅರುಣ್ ಆರ್. ಪಾಟೀಲ್ ಎಂಬವರು ಸಹ ಭಾರತದಲ್ಲಿ ಮೊದಲ ಬಾರಿಗೆ ಕ್ಯಾಡಿಲಾಕ್ ಕಾರು ಖರೀದಿಸಿದ್ದಾರೆ. ಈ ಕಾರನ್ನು ಯುಎಸ್ ಅಧ್ಯಕ್ಷರ ಬೆಂಗಾವಲಿನಲ್ಲಿ ಕಾಣಬಹುದು. ಇವರು ದುಬಾರಿ ಕಾರು ಮತ್ತು ಅದ್ಧೂರಿ ಬಂಗಲೆಯನ್ನು ಹೊಂದಿದ್ದಾರೆ.