ಭಾರತೀಯ ಕಾಲಮಾನದ ಪ್ರಕಾರ ನಾಳೆ ಮಧ್ಯಾಹ್ನ 2.45 ನಿಮಿಷಕ್ಕೆ ಸರಿಯಾಗಿ ಭೂಮಿಯ ಸಮೀಪವೇ ದೈತ್ಯ ಅಪಾಯಕಾರಿ ಕ್ಷುದ್ರಗ್ರಹವೊಂದು ಹಾದುಹೋಗಲಿದೆ ಎಂದು ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ತಿಳಿಸಿದೆ.
7482 (1994 PC1) ಎಂದು ಹೆಸರಿಸಲಾದ 3450 ಅಡಿ ಗಾತ್ರದ ಕ್ಷುದ್ರಗ್ರಹ ಇದಾಗಿದ್ದು, ಭೂರೇಖೆಯಿಂದ 1.2 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಹಾದುಹೋಗಲಿದೆ. ಅಂದರೆ, ಚಂದ್ರನ ದೂರಕ್ಕಿಂತಲೂ ಐದು ಪಟ್ಟು ದೂರವಾಗಿದೆ. ಇದರಿಂದ ಭೂಮಿಗೆ ಯಾವುದೇ ಅಪಾಯ ಇಲ್ಲ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಕ್ಷುದ್ರಗ್ರಹವು ಭೂಮಿ ಮೇಲಿನ ಯಾವುದೇ ದೈತ್ಯ ಕಟ್ಟಡಕ್ಕಿಂತಲೂ ದೊಡ್ಡದಾಗಿದೆ. ಅಂದಾಜು, 2722 ಅಡಿ ಎತ್ತರವಿರುವ ಬುರ್ಜ್ ಖಲೀಫಾಗಿಂತಲೂ ಹೆಚ್ಚಿನ ಗಾತ್ರದ್ದು. ಭಾರತೀಯ ಕಾಲಮಾನದ ಪ್ರಕಾರ ನಾಳೆ ಮಧ್ಯಾಹ್ನವಾದರೆ, ವಿದೇಶದ ಸಮಯದ ಪ್ರಕಾರ ಇಂದು (ಮಂಗಳವಾರ) 4.51 ನಿಮಿಷಕ್ಕೆ ಹಾದು ಹೋಗಲಿದೆ ಎಂದು ನಾಸಾ ಟ್ವೀಟ್ ಮಾಡಿದೆ.
ಅಲ್ಲದೇ, ಕ್ಷುದ್ರಗ್ರಹ 1994 PC1 ಹಾದುಹೋಗುವುದನ್ನು ನೀವು ಕೂಡ ನೋಡಬಹುದು ಎಂದು ಲಿಂಕ್ ಒಂದನ್ನು ಟ್ವೀಟ್ ಜೊತೆ ಲಗತ್ತಿಸಿದೆ.
ಇದನ್ನೂ ಓದಿ:ಕೋವಿಡ್ ಭೀತಿ : ಗೇಟ್ ಪರೀಕ್ಷೆ ಮುಂದೂಡಲು 23 ಸಾವಿರ ಅಭ್ಯರ್ಥಿಗಳಿಂದ ಅರ್ಜಿ