ಜಮ್ಮು: ಜಮ್ಮುವಿನಲ್ಲಿ ಗುಜ್ಜರ್ ದೇಶ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ.
ಜಮ್ಮು ಕಾಶ್ಮೀರದ ಕೆಲ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಗುಜ್ಜರ್ ಸಮುದಾಯದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಆಜಾದ್, ನರೇಂದ್ರ ಮೋದಿ ಅವರು ತಮ್ಮ ಹಿನ್ನೆಲೆಯನ್ನು ಮುಚ್ಚಿಟ್ಟಿಲ್ಲ ಮತ್ತು ತಾವು ಹಳ್ಳಿಯಿಂದ ಬಂದವರು ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮೋದಿಯೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ಅವರು ತಮ್ಮ ನೈಜತೆಯನ್ನು ಮರೆಮಾಚಿಲ್ಲ, ಅದನ್ನು ನಾವು ಮೆಚ್ಚಬೇಕು. ವ್ಯಕ್ತಿಯೊಬ್ಬ ತನ್ನ ಹಿನ್ನೆಲೆಯನ್ನು ಜಗತ್ತಿನೆದುರು ಮುಚ್ಚಿಡಲು ಪ್ರಯತ್ನಿಸಬಾರದು ಎಂದರು.