ಕರ್ನಾಟಕ

karnataka

ETV Bharat / bharat

ಜಿಹೆಚ್​ಎಂಸಿ ಎಲೆಕ್ಷನ್.. ಬೆಳಗ್ಗೆ 11ರವರೆಗೆ ಶೇ. 8.9ರಷ್ಟು ಮತದಾನ

ಕೊರೊನಾ ಹಾವಳಿ ಹಿನ್ನೆಲೆ ಮತದಾರರು ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ. ಮತದಾನ ಮಾಡಲು ಹಿಂಜರಿಯುತ್ತಿದ್ದಾರೆ..

ಜಿಹೆಚ್​ಎಂಸಿ ಎಲೆಕ್ಷನ್​
ಜಿಹೆಚ್​ಎಂಸಿ ಎಲೆಕ್ಷನ್​

By

Published : Dec 1, 2020, 12:03 PM IST

ಹೈದರಾಬಾದ್ ​:ಪ್ರಾದೇಶಿಕ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರದ ನಂತರ ಇಂದು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 11 ರವರೆಗೆ ಶೇ.8.9ರಷ್ಟು ಮತದಾನ ನಡೆದಿದೆ.

ಜಿಹೆಚ್​ಎಂಸಿಯ 150 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಮೆಗಾಸ್ಟಾರ್​ ಚಿರಂಜೀವಿ, ತೆಲಂಗಾಣ ರಾಜ್ಯ ಸಚಿವರು, ಟಿಆರ್​ಎಸ್​ ನಾಯಕರು ಸೇರಿ ಅನೇಕರು ಬೆಳ್ಳಂಬೆಳಗ್ಗೆ ಆಗಮಿಸಿ ಮತ ಚಲಾಯಿಸಿದ್ದಾರೆ.

ಕೊರೊನಾ ಹಾವಳಿ ಹಿನ್ನೆಲೆ ಮತದಾರರು ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ. ಮತದಾನ ಮಾಡಲು ಹಿಂಜರಿಯುತ್ತಿದ್ದಾರೆ.

ಇನ್ನು ಕೆಬಿಹೆಚ್​ಬಿ ಕಾಲೋನಿಯಲ್ಲಿ ಬಿಜೆಪಿ-ಟಿಆರ್​ಎಸ್​ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ABOUT THE AUTHOR

...view details