ಗಾಜಿಪುರ (ಉತ್ತರ ಪ್ರದೇಶ): ರಾಜಕಾರಣಿ ಮುಖ್ತಾರ್ ಅನ್ಸಾರಿ ಮತ್ತು ಆತನ ಸಹಚರ ಭೀಮ್ ಸಿಂಗ್ಗೆ ಸಂಸದ ಶಾಸಕ ನ್ಯಾಯಾಲಯ ಗುರುವಾರ 10 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ. 2005 ರಿಂದ ಮುಖ್ತಾರ್ ಜೈಲಿನಲ್ಲಿದ್ದರು.
ಅನ್ಸಾರಿ ವಿರುದ್ಧ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದು ಸುಮಾರು 26 ವರ್ಷಗಳ ಹಿಂದಿನ ಕೇಸ್ ಆಗಿದೆ. ಸಂಸದ ಶಾಸಕ ನ್ಯಾಯಾಲಯದ ನ್ಯಾಯಾಧೀಶ ದುರ್ಗೇಶ್ ಅವರು ಈ ಪ್ರಕರಣದಲ್ಲಿ ಮುಖ್ತಾರ್ ಮತ್ತು ಅವರ ಸಹಾಯಕರನ್ನು ತಪ್ಪಿತಸ್ಥರು ಎಂದು ಪರಿಗಣಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?:ಆಗಸ್ಟ್ 3, 1991 ರಂದು ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈ ಅವರನ್ನು ವಾರಣಾಸಿಯ ಲಾಹುರಾಬೀರ್ ಪ್ರದೇಶದಲ್ಲಿ ಮುಖ್ತಾರ್ ಮತ್ತು ಅವರ ಸಹಾಯಕರು ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣದ ತನಿಖೆಯ ಸಮಯದಲ್ಲಿ ಪೊಲೀಸರು ಮುಖ್ತಾರ್ ವಿರುದ್ಧ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅವರ ಸಹಾಯಕನ ವಿರುದ್ಧ 1996 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.