ಘಾಜಿಯಾಬಾದ್ : ಮದ್ಯ ಕುಡಿಸಿ ಮತ್ತಿನಲ್ಲಿದ್ದ ಯುವಕನೊಬ್ಬನ ಅಶ್ಲೀಲ ಫೋಟೋ ಮತ್ತು ವಿಡಿಯೋ ಮಾಡಿ ಯುವತಿಯೊಬ್ಬಳು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ ಘಾಜಿಯಾಬಾದ್ ಜಿಲ್ಲೆಯ ನಂದಗ್ರಾಮದಲ್ಲಿ ಜರುಗಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿದೆ.
ಮದ್ಯ ಕುಡಿಸಿ ಅಶ್ಲೀಲ ಫೋಟೋ, ವಿಡಿಯೋ ತೆಗೆದು ಬ್ಲಾಕ್ ಮೇಲ್ ಯುವಕನಿಗೆ ಮದ್ಯ ಕುಡಿಸಿ ಯುವತಿ ಬ್ಲ್ಯಾಕ್ ಮೇಲ್: ಈ ಕುರಿತು ಟ್ಯಾಟೂ ಕಲಾಕಾರನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ಯುವತಿಯೊಬ್ಬಳು ನನ್ನ ಅಂಗಡಿಗ ಟ್ಯಾಟೂ ಹಾಕಿಸಿಕೊಳ್ಳಲು ಬಂದಿದ್ದಳು. ನಂತರ ದಿನಗಳಲ್ಲಿ ಅವಳು ನನಗೆ ಗ್ರಾಹಕರನ್ನು ಕಳುಹಿಸಲು ಪ್ರಾರಂಭಿಸಿದಳು. ಅದಕ್ಕೆ ನಾನು ಕಮಿಷನ್ ಕೂಡಾ ಕೊಡುತ್ತಿದ್ದೆ. ಇದರಿಂದಾಗಿ ಬಹುಬೇಗನೇ ಆ ಯುವತಿ ಮತ್ತು ನಾನು ಸ್ನೇಹಿತರಾದೆವು ಕೂಡಾ.
ಒಂದು ದಿನ ಬರ್ತಡೇ ಪಾರ್ಟಿ ಇದೆ ಅಂತ ಕರೆದುಕೊಂಡು ಹೋಗಿದ್ದಳು. ಅಲ್ಲಿ ಬಹಳ ಜನ ಇದ್ದರು. ಆ ಪಾರ್ಟಿಯಲ್ಲಿ ನನಗೆ ಮದ್ಯ ಮತ್ತು ಮಾದಕ ವಸ್ತುಗಳನ್ನು ಬಲವಂತವಾಗಿ ಕುಡಿಸಿ ನಂತರ ಅಮಲಿನಲ್ಲಿದ್ದಾಗ ಆಶ್ಲೀಲ ಫೋಟೋ ಮತ್ತು ವಿಡಿಯೋ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಳು. ಇಲ್ಲದಿದ್ದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದು ನೊಂದ ಯುವಕ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ, ಯುವತಿಯ ಫೋನ್ನ್ನು ಪರಿಶೀಲಿಸಿದಾಗ ಅನೇಕ ಯುವಕರಿಗೆ ಬಲವಂತವಾಗಿ ಮದ್ಯ ಕುಡಿಸಿ ಫೋಟೋ ಮತ್ತು ವಿಡಿಯೋ ಮಾಡಿದ್ದಾಗಿ ತಿಳಿದು ಬಂತು. ನನಗಷ್ಟೇ ಅಲ್ಲದೆ, ಅನೇಕ ಯುವಕರಿಗೆ ಯುವತಿ ಬ್ಲ್ಯಾಕ್ ಮೇಲೆ ಮಾಡಿದ್ದಾಳೆ. ಹನಿಟ್ರ್ಯಾಪ್ ಮೂಲಕ ಹಣ ಗಳಿಕೆ ಮಾಡುತ್ತಿದ್ದಾಳೆ ಎಂದು ಗೊತ್ತಾಯಿತು ಎಂದು ಯುವಕ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.
ಸದ್ಯ ಹನಿಟ್ರಾಪ್ನಲ್ಲಿ ಸಿಕ್ಕಿಬಿದ್ದಿರುವ ಯುವಕ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ. ಅಲ್ಲದೇ, ಅನೇಕ ವಿಡಿಯೋ ಮತ್ತು ಫೋಟೋಗಳನ್ನು ಪೊಲೀಸರಿಗೆ ನೀಡಿದ್ದಾನೆ. ಯುವಕನ ದೂರಿನ ಮೆರೆಗೆ ಪೊಲೀಸರು ತನಿಖೆ ಕೈಗೊಡಿದ್ದಾರೆ.