ಕರ್ನಾಟಕ

karnataka

ETV Bharat / bharat

ಮುಳ್ಳನ್ನು ಮುಳ್ಳಿನಿಂದ್ಲೇ ತೆಗೆಯಲು ಅಮೆರಿಕ ಸಂಶೋಧಕರ ಪ್ರಯತ್ನ: ಡೆಂಗ್ಯೂ ವಿರುದ್ಧ ಸೊಳ್ಳೆಗಳ ಬಳಕೆ - ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ

ಸೊಳ್ಳೆಗಳನ್ನು ವಾತಾವರಣಕ್ಕೆ ಬಿಟ್ಟು ಡೆಂಗ್ಯೂ ಜ್ವರ ನಿಯಂತ್ರಿಸಲು ಅಮೆರಿಕ ಸಂಶೋಧಕರು ಮುಂದಾಗಿದ್ದಾರೆ. ಇದು ಅಚ್ಚರಿ ಎನಿಸಿದರೂ, ಸತ್ಯ.

Genetically modified mosquitoes released in US to fight disease-carrying species
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಲು ಅಮೆರಿಕ ಸಂಶೋಧಕರ ಪ್ರಯತ್ನ: ಡೆಂಗ್ಯೂ ವಿರುದ್ಧ ಸೊಳ್ಳೆಗಳ ಬಳಕೆ..

By

Published : May 13, 2021, 12:07 PM IST

ಹೈದರಾಬಾದ್:ಮುಳ್ಳಿನಿಂದಲೇ ಮುಳ್ಳನ್ನು ತೆಗೆಯಬೇಕೆಂಬ ಮಾತು ಜನಜನಿತ. ಈ ಮಾತಿಗೆ ಸಾಕ್ಷಿ ಒದಗಿಸುವ ರೀತಿಯಲ್ಲಿ ಅಮೆರಿಕದ ಸಂಶೋಧಕರು ಹೊಸ ಸಂಶೋಧನೆ ಮಾಡಿದ್ದು, ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಜ್ವರವನ್ನು ಸೊಳ್ಳೆಗಳಿಂದಲೇ ನಿವಾರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಹೌದು, ಅಮೆರಿಕದ ಸಂಶೋಧಕರು ತಳಿ (ಜೀನ್​) ಮಾರ್ಪಾಡು ಮಾಡಿದ 'ಓಕ್ಸ್ 5064' ಎಂಬ ಹೆಸರಿನ ಗಂಡು ಸೊಳ್ಳೆಗಳನ್ನು ಸೃಷ್ಟಿಸಿದ್ದು, ಇವುಗಳ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ವಿನೂತನ ವಿಧಾನ ಕಂಡುಹಿಡಿದಿದ್ದಾರೆ.

ಗಂಡು ಸೊಳ್ಳೆಗಳಿಂದ ಡೆಂಗ್ಯೂ ನಿಯಂತ್ರಣ ಹೇಗೆ?

ಸಾಮಾನ್ಯವಾಗಿ ಮಾನವನಿಗೆ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಹೆಣ್ಣು ಸೊಳ್ಳೆಗಳಿಂದ ಮಾತ್ರವೇ ಹರಡುತ್ತವೆ. ಡೆಂಗ್ಯೂ ಕಾಯಿಲೆ ಅಥವಾ ಜ್ವರ ಕೂಡಾ ಏಡೀಸ್ ಈಜಿಪ್ಟಿ ಎಂಬ ಜಾತಿಯ ಹೆಣ್ಣು ಸೊಳ್ಳೆಯ ಮೂಲಕ ಹರಡುತ್ತದೆ.

ಅಮೆರಿಕ ಸಂಶೋಧಕರು ಸೃಷ್ಟಿಸಿದ ಗಂಡು ಸೊಳ್ಳೆಗಳನ್ನು ವಾತಾವರಣಕ್ಕೆ ಬಿಡಲಾಗುತ್ತದೆ. ವಾತಾವರಣಕ್ಕೆ ಸೇರ್ಪಡೆಯಾಗುವ ಗಂಡು ಸೊಳ್ಳೆಗಳು ಹೆಣ್ಣು ಸೊಳ್ಳೆಗಳ ಸಂಪರ್ಕಕ್ಕೆ ಬರುತ್ತವೆ. ಈ ವೇಳೆ ಸಂಪರ್ಕಕ್ಕೆ ಬಂದ ಹೆಣ್ಣು ಸೊಳ್ಳೆಗಳಲ್ಲಿ ವಿಜ್ಞಾನಿಗಳು ಸಂಶೋಧನೆ ಮೂಲಕ ತಯಾರು ಮಾಡಿದ ಜೀನ್ ಅನ್ನು ಗಂಡು ಸೊಳ್ಳೆಗಳು ಸೇರ್ಪಡೆ ಮಾಡುವ ಕಾರಣದಿಂದ ಹೆಣ್ಣು ಸೊಳ್ಳೆಗಳ ಸಾವಿಗೆ ಕಾರಣವಾಗುತ್ತವೆ.

ಇದನ್ನೂ ಓದಿ:ವ್ಯಾಕ್ಸಿನ್​, ಆಕ್ಸಿಜನ್​ ಜೊತೆ ಪ್ರಧಾನಿ ಮೋದಿಯೂ ಗಾಯಬ್​: ರಾಗಾ ಟೀಕೆ

ಹೆಣ್ಣು ಸೊಳ್ಳೆಗಳ ಪ್ರಮಾಣ ಕಡಿಮೆಯಾಗುವ ಮೂಲಕ ಡೆಂಗ್ಯೂ ಮಾತ್ರವಲ್ಲದೇ ಈ ಸೊಳ್ಳೆಗಳ ಮೂಲಕ ಹರಡುವ ಹಳದಿ ಜ್ವರ ಮತ್ತು ನ್ಯುಮೋನಿಯಾ, ಮಲೇರಿಯಾಗಳನ್ನೂ ತಡೆಯಬಹುದಾಗಿದೆ.

ಪರಿಸರ ಇಲಾಖೆಯ ಅನುಮತಿಯೊಂದಿಗೆ ಈ ತಿಂಗಳ 1ನೇ ತಾರೀಕಿನಂದು ಕೆಲವು ಸ್ಥಳಗಳಲ್ಲಿ ಸೊಳ್ಳೆಗಳನ್ನು ವಾತಾವರಣಕ್ಕೆ ಬಿಡಲಾಗಿದೆ. ಜೀನ್ ಮಾರ್ಪಾಡು ಮಾಡಿದ ಸೊಳ್ಳೆಗಳು ಫ್ಲೊರೋಸೆಂಟ್​ ರೀತಿಯಲ್ಲಿ ಬೆಳಕು ಹೊರಸೂಸುವ ಕಾರಣದಿಂದ ಅವುಗಳನ್ನು ಕಂಡು ಹಿಡಿಯುವುದು ಸುಲಭ ಎನ್ನುತ್ತಾರೆ ಸಂಶೋಧಕರು.

ABOUT THE AUTHOR

...view details