ಕರ್ನಾಟಕ

karnataka

ETV Bharat / bharat

Generator blast : ಒಂದೇ ಕುಟುಂಬದ ಆರು ಮಂದಿ ದುರ್ಮರಣ - ಮಹಾರಾಷ್ಟ್ರದ ಚಂದ್ರಪುರ

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ವಿದ್ಯುತ್ ಕಡಿತಗೊಂಡಿದ್ದ ಹಿನ್ನೆಲೆ ರಮೇಶ್ ಲಷ್ಕರ್​ ಎಂಬುವರು ಜನರೇಟರ್​ ಆನ್ ಮಾಡಿದ್ರು. ಆ ವೇಳೆ ಸ್ಫೋಟ ಸಂಭವಿಸಿ ದುರಂತ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ..

ಒಂದೇ ಕುಟುಂಬದ ಆರು ಮಂದಿ ದುರ್ಮರಣ
ಒಂದೇ ಕುಟುಂಬದ ಆರು ಮಂದಿ ದುರ್ಮರಣ

By

Published : Jul 13, 2021, 12:58 PM IST

ಚಂದ್ರಪುರ (ಮಹಾರಾಷ್ಟ್ರ): ಜನರೇಟರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ದುರ್ಗಾಪುರದಲ್ಲಿ ನಡೆದಿದೆ. ಮೃತರಲ್ಲಿ ಮಕ್ಕಳು ಹಾಗೂ ಇತ್ತೀಚೆಗೆ ಮದುವೆಯಾದ ನವಜೋಡಿಯೂ ಸೇರಿದ್ದಾರೆ.

ಒಂದೇ ಕುಟುಂಬದ ಆರು ಮಂದಿ ದುರ್ಮರಣ

ಮೃತರನ್ನು ರಮೇಶ್ ಲಷ್ಕರ್ (45), ಅಜಯ್ ಲಷ್ಕರ್ (21), ಲಖನ್ ಲಷ್ಕರ್ (10), ಕೃಷ್ಣ ಲಷ್ಕರ್ (8), ಪೂಜಾ ಲಷ್ಕರ್ (14) ಹಾಗೂ ಮಾಧುರಿ ಲಷ್ಕರ್ (20) ಎಂದು ಗುರುತಿಸಲಾಗಿದೆ. ದಾಸು ಲಷ್ಕರ್ ಎಂಬಾಕೆ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ವಿದ್ಯುತ್ ಕಡಿತಗೊಂಡಿದ್ದ ಹಿನ್ನೆಲೆ ರಮೇಶ್ ಲಷ್ಕರ್​ ಎಂಬುವರು ಜನರೇಟರ್​ ಆನ್ ಮಾಡಿದ್ರು. ಆ ವೇಳೆ ಸ್ಫೋಟ ಸಂಭವಿಸಿ ದುರಂತ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ABOUT THE AUTHOR

...view details