ಕರ್ನಾಟಕ

karnataka

By

Published : Dec 31, 2020, 10:44 PM IST

ETV Bharat / bharat

ಕೊರಿಯಾ ಸೇನೆಯಿಂದ ಗಾರ್ಡ್ ಆಫ್ ಆನರ್​ ಗೌರವ ಪಡೆದ ಸೇನಾ ಮುಖ್ಯಸ್ಥರು!

ಸೇನಾ ಮುಖ್ಯಸ್ಥರು ಕೊರಿಯಾ ಗಣರಾಜ್ಯದ ಮುಖ್ಯಸ್ಥ ಜನರಲ್ ನಾಮ್ ಯೊಂಗ್ ಶಿನ್ ಅವರ ಜೊತೆ ದ್ವಿಪಕ್ಷೀಯ ರಕ್ಷಣಾ ಸಹಕಾರದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಇದಕ್ಕೂ ಮುನ್ನ ಜನರಲ್ ನರವಾನೆ ಡೇಜಿಯಾನ್‌ನಲ್ಲಿರುವ ರಕ್ಷಣಾ ಅಭಿವೃದ್ಧಿ ಏಜೆನ್ಸಿಗೆ ಭೇಟಿ ನೀಡಿದ್ದರು.

general-naravane-receives-guard-of-honour-at-rok-army-headquarters
ಸೇನಾ ಮುಖ್ಯಸ್ಥ ಮುಕುಂದ್ ನಾರವಾನೆ

ಸಿಯೋಲ್ (ಸೌತ್ ಕೊರಿಯಾ): ಸೇನಾ ಮುಖ್ಯಸ್ಥ, ಜನರಲ್ ಮನೋಜ್ ಮುಕುಂದ್ ನರವಾನೆ ಅವರು ಗೈರಿಯೊಂಗ್‌ನಲ್ಲಿರುವ ರಿಪಬ್ಲಿಕ್ ಆಫ್ ಕೊರಿಯಾ (ಆರ್‌ಒಕೆ) ಸೇನಾ ಪ್ರಧಾನ ಕಚೇರಿಯಲ್ಲಿ ಗಾರ್ಡ್ ಆಫ್ ಆನರ್​ ಗೌರವ ಪಡೆದಿದ್ದಾರೆ ಎಂದು ಭಾರತೀಯ ಸೇನೆಯ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ನಿರ್ದೇಶನಾಲಯ ಮಾಹಿತಿ ನೀಡಿದೆ.

ಸೇನಾ ಮುಖ್ಯಸ್ಥರು ಕೊರಿಯಾ ಗಣರಾಜ್ಯದ ಮುಖ್ಯಸ್ಥ ಜನರಲ್ ನಾಮ್ ಯೊಂಗ್ ಶಿನ್ ಅವರ ಜೊತೆ ದ್ವಿಪಕ್ಷೀಯ ರಕ್ಷಣಾ ಸಹಕಾರದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಇದಕ್ಕೂ ಮುನ್ನ ಜನರಲ್ ನರವಾನೆ ಡೇಜಿಯಾನ್‌ನಲ್ಲಿರುವ ರಕ್ಷಣಾ ಅಭಿವೃದ್ಧಿ ಏಜೆನ್ಸಿಗೆ ಭೇಟಿ ನೀಡಿದ್ದರು.

ಸೇನಾ ಮುಖ್ಯಸ್ಥ ಜನರಲ್ ನರವಾನೆ ಅವರು ಡೇಜಿಯಾನ್‌ನಲ್ಲಿನ ರಕ್ಷಣಾ ಅಭಿವೃದ್ಧಿಯ ಏಜೆನ್ಸಿಗೆ ಭೇಟಿ ನೀಡಿದರು. ದಕ್ಷಿಣ ಕೊರಿಯಾದ ರಕ್ಷಣಾ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು ಎಡಿಡಿ ಹೊಂದಿದೆ. ದಕ್ಷಿಣ ಕೊರಿಯಾಕ್ಕೆ ಸಿಒಎಎಸ್​​ ಭೇಟಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸಲಿದೆ ಎಂದು ಎಡಿಜಿ ಪಿಐ-ಇಂಡಿಯನ್ ಆರ್ಮಿ ಟ್ವಿಟರ್​​​ನಲ್ಲಿ ತಿಳಿಸಿದೆ.

ಜನರಲ್ ನರವಾನೆ ಡಿಸೆಂಬರ್ 28 ರಿಂದ 30ರ ವರೆಗೆ ಮೂರು ದಿನಗಳ ಆರ್‌ಒಕೆಗೆ ಭೇಟಿ ನೀಡಿದ್ದರು. ಭೇಟಿಯ ಸಮಯದಲ್ಲಿ, ಅವರು ಆರ್​​ಒಕೆ ಹಿರಿಯ ಮಿಲಿಟರಿ ಮತ್ತು ನಾಗರಿಕ ನಾಯಕತ್ವವನ್ನು ಭೇಟಿಯಾದರು. ಭಾರತೀಯ ಸೇನಾ ಮುಖ್ಯಸ್ಥರು ಯುಎಇ ಮತ್ತು ಸೌದಿ ಅರೇಬಿಯಾಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ಕಾಶ್ಮೀರಿ ಹುಡುಗಿಗೆ ಬೈಡನ್​ ಸರ್ಕಾರದಲ್ಲಿ ಹಿರಿಯ ಸ್ಥಾನ: ನೆರೆಹೊರೆಯವರಲ್ಲಿ ಸಂತಸವೋ ಸಂತಸ

ABOUT THE AUTHOR

...view details