ಡೆಹ್ರಾಡೂನ್(ಉತ್ತರಾಖಂಡ):ಚೀನಾಗೆ ಭಾರತದ ಗಡಿ ಗೊತ್ತಿದೆ. ಭಾರತಕ್ಕೂ ಚೀನಾದ ಗಡಿ ಗೊತ್ತಿದೆ. ಕೆಲವೊಮ್ಮೆ ಚೀನಾ ತನ್ನ ದೇಶಕ್ಕೆ ಸೇರಿದ್ದು ಎಂದುಕೊಂಡ ಪ್ರದೇಶಗಳಿಗೆ ಆಗಾಗ ಭೇಟಿ ನೀಡುತ್ತದೆ. ಭಾರತವೂ ತನ್ನ ಪ್ರದೇಶಗಳಿಗೆ ಆಗಾಗ ಭೇಟಿ ನೀಡುತ್ತದೆ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಸ್ಪಷ್ಟನೆ ನೀಡಿದರು.
ಉತ್ತರಾಖಂಡ ರಾಜ್ಯದ 22ನೇ ವರ್ಷದ ಸಂಸ್ಥಾಪನಾ ದಿನದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಬಿಪಿನ್ ರಾವತ್ ಕೆಲವೊಮ್ಮೆ ಚೀನಾ ಬಾರಾಹೋಟಿ, ಲಡಾಖ್‌ನಂತಹ ಪ್ರದೇಶಗಳಿಗೆ ಭೇಟಿ ನೀಡುತ್ತದೆ. ನಾವೂ ಕೂಡಾ ಕೆಲವೊಂದು ಪ್ರದೇಶಗಳಿಗೆ ಭೇಟಿ ನೀಡುತ್ತೇವೆ. ಗಡಿಯಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಮ್ಮ ದೇಶದಲ್ಲಿ ಚೀನಾದವರನ್ನು ನೆಲೆಸಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಕಳೆದ ವಾರ ಬಿಡುಗಡೆಯಾದ ಅಮೆರಿಕದ ರಕ್ಷಣಾ ಇಲಾಖೆ ವಾರ್ಷಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅರುಣಾಚಲ ಪ್ರದೇಶದ ಸಮೀಪವಿರುವ ಟಿಬೆಟ್ ವಿವಾದಿತ ಪ್ರದೇಶದಲ್ಲಿ ಚೀನಾ ನೂರು ಮನೆಗಳಿರುವ ಗ್ರಾಮವನ್ನು ನಿರ್ಮಾಣ ಮಾಡಿತ್ತು. ಇದರ ಜೊತೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.