ಕರ್ನಾಟಕ

karnataka

ETV Bharat / bharat

ವೀರ ಪುತ್ರನ​ ಪಾರ್ಥಿವ ಶರೀರದ ಅಂತಿಮ ಯಾತ್ರೆ.. ಮಹಾಯೋಧನಿಗೆ ಶ್ವಾನದಿಂದಲೂ ಗೌರವ! - ಸೇನಾ ನಾಯಕ ರಾವತ್​​ ಅಂತ್ಯಕ್ರಿಯೆ

ಅಗಲಿದ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​ ಅವರಿಗೆ ಕಣ್ಣೀರಿನ ವಿದಾಯ ಹೇಳಲಾಗಿದ್ದು, ಪಾರ್ಥಿವ ಶರೀರದ ಮೆರವಣಿಗೆ ವೇಳೆ ಶ್ವಾನವೊಂದು ಗೌರವ ಸಲ್ಲಿಕೆ ಮಾಡಿದೆ.

Gen Rawat cremated
Gen Rawat cremated

By

Published : Dec 10, 2021, 6:14 PM IST

ನವದೆಹಲಿ:ಮೂರು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​​​​ ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವದೊಂದಿಗೆ ನಡೆದಿದ್ದು, ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್​ನಲ್ಲಿ ಅಂತ್ಯಕ್ರಿಯೆ ನಡೆಯಿತು. ಇದಕ್ಕೂ ಮುಂಚಿತವಾಗಿ ಅವರ ನಿವಾಸದಿಂದ ಅಂತಿಮ ಯಾತ್ರೆ ನಡೆಸಲಾಯಿತು.

ಸುಮಾರು ಒಂದೂವರೆ ಗಂಟೆಗಳ ಕಾಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಗಿದ್ದು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ 99 ಎಲ್ಲ ಶ್ರೇಣಿಯ ಸಿಬ್ಬಂದಿ ಮುಂಭಾಗದ ಬೆಂಗಾವಲು ಮತ್ತು ಮೂರು ಸೇವೆಗಳ 99 ಎಲ್ಲಾ ಶ್ರೇಣಿಗಳು ಹಿಂಭಾಗದ ಎಸ್ಕಾರ್ಟ್ ಆಗಿ ಕಾರ್ಯನಿರ್ವಹಿಸಿದರು.

ಶ್ವಾನದಿಂದಲೂ ಗೌರವ

ಅಗಲಿದ ವೀರಪುತ್ರನ ಪಾರ್ಥಿವ ಶರೀರದ ಅಂತಿಮ ಯಾತ್ರೆ ತೆರಳುತ್ತಿದ್ದ ವೇಳೆ ಶ್ವಾನವೊಂದು ಬಿಪಿನ್​​ ರಾವತ್​​ ಅವರಿಗೆ ಗೌರವ ಸಲ್ಲಿಸಿದೆ. ವೀರ ಮರಣವನ್ನಪ್ಪಿದ ಸೇನಾ ಮುಖ್ಯಸ್ಥರ ವಾಹನದ ಪಕ್ಕದಲ್ಲೇ ಶ್ವಾನವೊಂದು ಕೆಲ ನಿಮಿಷಗಳ ಕಾಲ ನಿಂತಿದ್ದು, ತದ ನಂತರ ವಾಹನದ ಮುಂದೆ ತೆರಳಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ವೀರ ಪುತ್ರನಿಗೆ ಶ್ವಾನದಿಂದಲೂ ಗೌರವ

ಇದನ್ನೂ ಓದಿರಿ:ಪಂಚಭೂತಗಳಲ್ಲಿ ಲೀನರಾದ ವೀರಪುತ್ರ ರಾವತ್​: ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ, ಪುತ್ರಿಯರಿಂದ ಅಂತಿಮ ವಿಧಿವಿಧಾನ

ಕಳೆದ ಎರಡು ದಿನಗಳ ಹಿಂದೆ ತಮಿಳುನಾಡಿನ ಕುನೂರು ಬಳಿ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್​​ ಅವರ ಅಂತ್ಯಕ್ರಿಯೆ ದೆಹಲಿಯ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ನೆರವೇರಿತು.

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಪಾರ್ಥಿವ ಶರೀರದ ಮೆರವಣಿಗೆ ದೆಹಲಿ ಕಂಟೋನ್ಮೆಂಟ್‌ನಲ್ಲಿರುವ ಬ್ರಾರ್ ಸ್ಕ್ವೇರ್ ಸ್ಮಶಾನದ ಕಡೆಗೆ ತೆರಳುತ್ತಿದ್ದ ವೇಳೆ ಜಬ್​ ತಕ್​ ಸೂರಜ್​​​ ಚಾಂದ್​ ರಹೇಗಾ, ಬಿಪಿನ್ ಜಿ ಕಾ ನಾಮ್ ರಹೇಗಾ.. ಜೈ ಹಿಂದ್​​ ಎಂಬ ಘೋಷಣೆ ಕೂಗಿದರು.

ABOUT THE AUTHOR

...view details