ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿರುವ ದೇಶದ ಪ್ರಮುಖ ಸಾಧಕರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆಯಾಗಿದೆ. ಕಳೆದ ವರ್ಷ ಹೆಲಿಕಾಪ್ಟರ್ ಅವಘಡದಲ್ಲಿ ಹುತಾತ್ಮರಾಗಿರುವ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಜನರಲ್(ಸಿಡಿಎಸ್) ಬಿಪಿನ್ ರಾವತ್ ಅವರಿಗೆ ಪದ್ಮವಿಭೂಷಣ ಘೋಷಿಸಲಾಗಿದೆ.
ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ತಮಿಳುನಾಡಿನ ಕನೂರಿನಲ್ಲಿ ನಡೆದ ವಾಯುಪಡೆ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿದ್ದರು. ಇವರ ಸಾಧನೆ ಪರಿಗಣನೆಗೆ ತೆಗೆದುಕೊಂಡಿರುವ ಕೇಂದ್ರ ಸರ್ಕರ ಇದೀಗ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸುವ ಮೂಲಕ ಕೇಂದ್ರ ಸರ್ಕಾರ ಗೌರವ ನೀಡಿದೆ. ಇದರ ಜೊತೆಗೆ ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಉಳಿದಂತೆ ಪ್ರಭಾ ಅತ್ರೆ (ಕಲೆ; ಮಹಾರಾಷ್ಟ್ರ), ರಾಧೇಶ್ಯಾಮ್ ಖೆಮ್ಕಾ (ಸಾಹಿತ್ಯ ಮತ್ತು ಶಿಕ್ಷಣ, ಮರಣೋತ್ತರ, ಉತ್ತರ ಪ್ರದೇಶ) ಅವರಿಗೂ ಗೌರವ ನೀಡಲಾಗಿದೆ.
ಇದನ್ನೂ ಓದಿರಿ: ದಲಿತ ಕವಿ ದಿ. ಸಿದ್ದಲಿಂಗಯ್ಯ ಸೇರಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪುರಸ್ಕಾರ
ಲಸಿಕೆ ತಯಾಕರಿಗೆ ಪದ್ಮಭೂಷಣ ಗೌರವ..ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಕಂಡು ಹಿಡಿದಿರುವ ಭಾರತ್ ಬಯೋಟೆಕ್ನ ಮುಖ್ಯಸ್ಥ ಡಾ. ಕೃಷ್ಣ ಎಲ್ಲಾ ಹಾಗೂ ಅವರ ಪತ್ನಿ ಸುಚಿತ್ರ ಎಲ್ಲಾ ಅವರಿಗೆ ಪದ್ಮಭೂಷಣ ಗರಿ ಒಲಿದಿದೆ.