ಕರ್ನಾಟಕ

karnataka

ETV Bharat / bharat

ರಾಯಗಡ​ ನದಿ ಪಾತ್ರದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಮುಂದುವರೆದ ತನಿಖೆ - gelatin sticks found in Bhogavati

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಭೋಗಾವತಿ ನದಿಪಾತ್ರದಲ್ಲಿ ಬಾಂಬ್ ತಯಾರಿಸಲು ಬಳಸಬಹುದಾದ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

gelatin sticks
ಜಿಲೆಟಿನ್ ಕಡ್ಡಿಗಳು ಪತ್ತೆ

By

Published : Nov 11, 2022, 8:29 AM IST

Updated : Nov 11, 2022, 8:56 AM IST

ರಾಯಗಡ(ಮಹಾರಾಷ್ಟ್ರ):ಮುಂಬೈ-ಗೋವಾ ಹೆದ್ದಾರಿಯ ರಾಯಗಡ ಜಿಲ್ಲೆಯ ಭೋಗಾವತಿ ನದಿಪಾತ್ರದಲ್ಲಿ ಜಿಲೆಟಿನ್ ಸ್ಫೋಟಕಗಳು ಪತ್ತೆಯಾಗಿವೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ನಿನ್ನೆ ರಾತ್ರಿ ಮುಂಬೈ-ಗೋವಾ ಮಾರ್ಗದ ಭೋಗಾವತಿ ಸಮೀಪ 10 ರಿಂದ 12 ಜಿಲೆಟಿನ್ ಕಡ್ಡಿಗಳು ದೊರೆತಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರಾಯಗಡ ಮತ್ತು ಮುಂಬೈ ಬಾಂಬ್ ಪತ್ತೆ ದಳದ ಸಿಬ್ಬಂದಿ ಜಿಲೆಟಿನ್ ಕಡ್ಡಿಗಳನ್ನು ನಿಷ್ಕ್ರಿಯಗೊಳಿಸಿದರು. ಜೊತೆಗೆ ರಾಯಗಡ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ ಘರ್ಗೆ, ಪೊಲೀಸ್ ಅಧೀಕ್ಷಕ ಅತುಲ್ ಝೆಂಡೆ ಸಹ ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿ ಪಡೆದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಜಿಲೆಟಿನ್ ಕಡ್ಡಿಗಳನ್ನ ನಿಷ್ಕ್ರಿಯಗೊಳಿಸಿದ ಬಾಂಬ್ ಪತ್ತೆ ದಳ

ಇದನ್ನೂ ಓದಿ:ಟ್ರ್ಯಾಕ್ಟರ್​ನಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿ ಸಾಗಾಟ... 400 ಜಿಲೆಟಿನ್ ಕಡ್ಡಿ ವಶ

ಸದ್ಯಕ್ಕೆ ಈ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸ್ಥಳದಲ್ಲಿ ಇನ್ನೂ ಹೆಚ್ಚಿನ ಸ್ಫೋಟಕಗಳಿವೆಯೇ? ಎಂದು ಪರಿಶೀಲಿಸಲಾಗುತ್ತಿದೆ. ಪತ್ತೆಯಾದ ಜಿಲೆಟಿನ್ ಕಡ್ಡಿಗಳ ಮೂಲದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.

ಇದನ್ನೂ ಓದಿ:82 ಕ್ವಿಂಟಾಲ್ ಅಕ್ರಮ ಅಮೋನಿಯಂ ನೈಟ್ರೇಟ್, 2,095 ಜಿಲೆಟಿನ್ ಕಡ್ಡಿ ಜಪ್ತಿ

Last Updated : Nov 11, 2022, 8:56 AM IST

ABOUT THE AUTHOR

...view details