ಕರ್ನಾಟಕ

karnataka

ETV Bharat / bharat

ಲಾಕ್​​ಡೌನ್​ ಬದಲು ಲಸಿಕೆ ಪಡೆಯುವ ವಯಸ್ಸಿನ ಮಿತಿ ತೆಗೆದುಹಾಕಿ: ಕೇಂದ್ರಕ್ಕೆ ಗೆಹ್ಲೋಟ್ ಆಗ್ರಹ

ಕೊರೊನಾ ಕೇಸ್​ಗಳು ಹೆಚ್ಚಾಗುತ್ತಿರುವುದರಿಂದ ಸರ್ಕಾರವು ವ್ಯಾಕ್ಸಿನೇಷನ್ ಬಗ್ಗೆ ಗಮನಹರಿಸಬೇಕು. ವಯಸ್ಸಿನ ಮಾನದಂಡಗಳನ್ನು ತೆಗೆದುಹಾಕಿ, ತ್ವರಿತಗತಿಯಲ್ಲಿ ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡಬೇಕು ಎಂದು ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್​ ಮಾಡಿದ್ದಾರೆ.

Gehlot urges Centre to remove age limit on Covid vax
ಸಿಎಂ ಗೆಹ್ಲೋಟ್

By

Published : Mar 23, 2021, 2:33 PM IST

ಜೈಪುರ (ರಾಜಸ್ಥಾನ):ಕೊರೊನಾ ವೈರಸ್‌ನ ಎರಡನೇ ಅಲೆಯನ್ನು ನಿಯಂತ್ರಿಸಲು ಗರಿಷ್ಠ ಪ್ರಮಾಣದಲ್ಲಿ ಕೋವಿಡ್ ಲಸಿಕೆಗಳು ಲಭ್ಯವಾಗುವಂತೆ ಮಾಡಬೇಕು. ಲಸಿಕೆ ಪಡೆಯಲು ವಯಸ್ಸಿನ ಮಿತಿ ತೆಗೆದುಹಾಕಿ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸರ್ಕಾರವು ವ್ಯಾಕ್ಸಿನೇಷನ್ ಬಗ್ಗೆ ಗಮನಹರಿಸಬೇಕು. ವಯಸ್ಸಿನ ಮಾನದಂಡಗಳನ್ನು ತೆಗೆದುಹಾಕಿ, ತ್ವರಿತಗತಿಯಲ್ಲಿ ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡಬೇಕು ಎಂದು ಸಿಎಂ ಗೆಹ್ಲೋಟ್ ಟ್ವೀಟ್​ ಮಾಡಿದ್ದಾರೆ.

ಸಾರ್ವಜನಿಕರ ಜೀವನೋಪಾಯಕ್ಕೆ ಲಾಕ್​​ಡೌನ್ ಮಾರಕ

24-45 ವರ್ಷದೊಳಗಿನ ಜನರಿಗೆ ಲಸಿಕೆ ಹಾಕಬೇಕು ಎಂಬ ಬೆಂಗಳೂರು ವೈದ್ಯ ದೇವಿ ಶೆಟ್ಟಿ ಅವರ ಸಲಹೆಯು ಸೂಕ್ತವಾಗಿದೆ. ಏಕೆಂದರೆ ಈ ವಯಸ್ಸಿನವರು ಹೆಚ್ಚಾಗಿ ವೃತ್ತಿಪರ ಕಾರಣಗಳಿಗಾಗಿ ಮನೆಯಿಂದ ಹೊರ ಹೋಗುತ್ತಾರೆ. ಹೆಚ್ಚು ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ. ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ಮತ್ತೆ ಲಾಕ್​​ಡೌನ್​ ಎಂದರೆ ಅದು ಸಾರ್ವಜನಿಕರ ಜೀವನೋಪಾಯಕ್ಕೆ ಮಾರಕವಾಗುತ್ತದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ದೇಶಾದ್ಯಂತ 2ನೇ ಹಂತಹ ಕೊರೊನಾ ವ್ಯಾಕ್ಸಿನೇಷನ್​ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್​ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರ ಬಳಿಕ ಇದೀಗ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ. ಜನವರಿ 16ರಿಂದ ಈವರೆಗೆ ಒಟ್ಟು 4,84,94,594 ಮಂದಿಗೆ ಲಸಿಕೆ ನೀಡಲಾಗಿದೆ.

ABOUT THE AUTHOR

...view details