ಗಯಾ: ದೇವನೊಬ್ಬ ನಾಮ ಹಲವು ಎಂದು ಹೇಳಿದರೂ ನಾವು ನಮ್ಮ ದೇವರು ಶ್ರೇಷ್ಠ, ಅವರ ದೇವರು ಕನಿಷ್ಠ ಎಂಬ ವಾದ - ವಿವಾದಗಳಲ್ಲೇ ಕಾಲ ಕಳೆಯುವ ಸಮಯದಲ್ಲಿ ಈ ಘಟನೆ ನಿಜಕ್ಕೂ ಸಮಾಜಕ್ಕೆ ಆದರ್ಶನೀಯವಾಗಿದೆ. ಇಲ್ಲೊಂದು ಮುಸ್ಲಿಂ ಸಮುದಾಯವು ರಾಮನವಮಿಯ ಧ್ವಜವನ್ನು ತಯಾರು ಮಾಡುತ್ತದೆ.
ಬಿಹಾರದ ಗಯಾ ಜಿಲ್ಲೆ ನಾಗರಿಕತೆಯ ತೊಟ್ಟಿಲು, ಇಲ್ಲಿ ಮುಸ್ಲಿಂ ಮತ್ತು ಹಿಂದೂ ಎರಡೂ ಸಮುದಾಯಗಳು ಪರಸ್ಪರ ಸಹೋದರತ್ವದಿಂದ ಪ್ರತಿ ಹಬ್ಬವನ್ನು ಆಚರಿಸುತ್ತಾರೆ. ಈ ನಗರದಲ್ಲಿ, ಒಂದು ಕಡೆ ಮುಸ್ಲಿಂ ಸಮುದಾಯದ ಕುಶಲಕರ್ಮಿಗಳು ಉಪವಾಸ ಮಾಡುವ ಮೂಲಕ ರಾಮನವಮಿಯ ಧ್ವಜವನ್ನು ತಯಾರಿಸುತ್ತಾರೆ ಇನ್ನೊಂದು ಕಡೆ ಮುಸ್ಲಿಮೇತರ ವರ್ಗದವರು ಈದ್ ಸಂದರ್ಭದಲ್ಲಿ ಈದ್ ಸರಕುಗಳನ್ನು ಮಾರಾಟ ಮಾಡುತ್ತಾರೆ
ಈ ವರ್ಷ ರಾಮನವಮಿ ಮತ್ತು ರಂಜಾನ್ ಏಕಕಾಲದಲ್ಲಿ ಜರುಗಲಿದೆ. ದೇಶದ ಅನೇಕ ಭಾಗಗಳಲ್ಲಿ ಹಲವಾರು ಸಂಘರ್ಷ ಮತ್ತು ಹಿಂಸಾಚಾರದ ಘಟನೆಗಳು ನಡೆದಿವೆ. ಆದರೆ, ಗಯಾದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಉಪವಾಸದ ನಡುವೆಯೂ ರಾಮನವಮಿಯ ಧ್ವಜವನ್ನು ತಯಾರಿಸುತ್ತಿದ್ದಾರೆ.