ನವದೆಹಲಿ:ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ (Pakistan PM Imran Khan) ಅವರನ್ನು ತಮ್ಮ 'ದೊಡ್ಡ ಸಹೋದರ' ಎಂದು ನಿನ್ನೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಗೌತಮ್ ಗಂಭೀರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
'ನೀವು ಮೊದಲು ನಿಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿ. ಆ ಬಳಿಕ ಉಗ್ರರ ದೇಶದ ಮುಖ್ಯಸ್ಥನನ್ನು ನಿಮ್ಮ ಸಹೋದರನೆಂದು ಕರೆಯಿರಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಎಎನ್‌ಐ (ANI) ಜೊತೆ ಮಾತನಾಡಿರುವ ಗಂಭೀರ್ (Gautam Gambhir), 'ಸಿಧು ಅವರ ಮಕ್ಕಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆಯೇ?, ಹೀಗಿದ್ದಿದ್ದರೆ ಅವರು ಇಮ್ರಾನ್ ಖಾನ್ ಅವರನ್ನು ತನ್ನ ದೊಡ್ಡ ಸಹೋದರ ಎಂದು ಕರ್ತಾರ್‌ಪುರ್ ಸಾಹೀಬ್‌ನಲ್ಲಿ ಕರೆಯುತ್ತಿದ್ದರೇ?' ಎಂದು ಪ್ರಶ್ನಿಸಿದ್ದಾರೆ.
ನವಜೋತ್ ಸಿಂಗ್ ಸಿಧು ಹೇಳಿಕೆಗೆ ಸಂಸದ ಗೌತಮ್ ಗಂಭೀರ್ ಪ್ರತಿಕ್ರಿಯೆ 'ಸಿಧು ಅವರಿಂದ ಇದಕ್ಕಿಂತ ನಾಚಿಕೆಗೇಡಿನ ಹೇಳಿಕೆ ಮತ್ತೊಂದಿರಲಾರದು. ಅವರು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಬಾಜ್ವಾ ಅವರನ್ನು ಪ್ರೀತಿಯಿಂದ ಆಲಿಂಗಿಸಿಕೊಳ್ತಾರೆ. ಕರ್ತಾರ್‌ಪುರ್ ಸಾಹೀಬ್‌ಗೆ ಹೋಗಿ ಅಲ್ಲಿ ಇಮ್ರಾನ್ ಖಾನ್ ಅವರನ್ನು ತನ್ನ ದೊಡ್ಡ ಸಹೋದರ ಎನ್ನುತ್ತಾರೆ. ಆದರೆ, ಕಳೆದ ತಿಂಗಳು ಕಾಶ್ಮೀರದಲ್ಲಿ 40 ನಾಗರಿಕರು ಹಾಗು ಭಾರತೀಯ ಸೇನಾ ಸಿಬ್ಬಂದಿಯನ್ನು ಕೊಂದು ಹಾಕಲಾಗಿದೆ. ಈ ಬಗ್ಗೆ ಸಿಧು ತುಟಿ ಬಿಚ್ಚಿಲ್ಲ. ಅವರು ದೇಶವನ್ನು ಯಾರು ರಕ್ಷಿಸುತ್ತಿದ್ದಾರೋ ಅವರ ವಿರುದ್ಧ ಹೋಗುತ್ತಿದ್ದಾರೆ' ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:'ಇಂದಿರಾಗಾಂಧಿ ಖಲಿಸ್ತಾನಿಗಳನ್ನು ಸೊಳ್ಳೆಗಳಂತೆ ಬಡಿದು ಹಾಕಿದರು': ಕಂಗನಾ ವಿರುದ್ಧ ದೂರು ದಾಖಲು