ನವದೆಹಲಿ: ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್,ಬಡವರಿಗೆ, ನಿರ್ಗತಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಮ್ಮ ಕ್ಷೇತ್ರದಲ್ಲಿ ಜನ ರಸೋಯಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಲಕ್ಷ್ಮಿ ನಗರ ವಿಧಾನಸಭಾ ಭಾಗದ ಶಕರಪುರದಲ್ಲಿ ಇಂದು ನಾಲ್ಕನೇ 'ಜನ ರಸೋಯಿ' ಯನ್ನು ಉದ್ಘಾಟಿಸಿದರು.
ಪೂರ್ವ ದೆಹಲಿಯ ವಿವಿಧ ಭಾಗಗಳಲ್ಲಿ ಈ ರೀತಿಯ 10 ಕ್ಯಾಂಟೀನ್ಗಳನ್ನು ತೆರೆಯಲು ಗಂಭೀರ್ ಯೋಜಿಸಿದ್ದಾರೆ. ಪ್ರತಿ ಊಟಕ್ಕೆ ಒಂದು ರೂಪಾಯಿ ನಿಗದಿಪಡಿಸಲಾಗಿದ್ದು, ಅತ್ಯಂತ ಪೌಷ್ಟಿಕ, ಗುಣಮಟ್ಟ, ಆರೋಗ್ಯಕರ ಮತ್ತು ರುಚಿಕರ ಆಹಾರವಾಗಿರಲಿದೆ. ನಿತ್ಯ 500 ಜನರಿಗೆ ಆಹಾರ ನೀಡಲಾಗುವುದು. ಎರಡನೇ ಬಾರಿ ಆಹಾರ ಸೇವನೆಗೂ ಅವಕಾಶ ಇರಲಿದೆ. ಅನ್ನ, ದಾಲ್, ತರಕಾರಿ ಸಾಂಬಾರು ಇರಲಿದೆ ಎಂದು ಗಂಭೀರ್ ಹೇಳಿದರು.