ಕರ್ನಾಟಕ

karnataka

ETV Bharat / bharat

ಫ್ರಾನ್ಸ್​ನ ಬರ್ನಾರ್ಡ್​ ಅರ್ನಾಲ್ಡ್ ಹಿಂದಿಕ್ಕಿದ ಗೌತಮ್​ ಅದಾನಿ ವಿಶ್ವದ ಮೂರನೇ ಸಿರಿವಂತ ವ್ಯಕ್ತಿ - ಈಟಿವಿ ಭಾರತ ಕನ್ನಡ ನ್ಯೂಸ್​

ಶರವೇಗದಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ಭಾರತದ ಆಧುನಿಕ ಅದಾನಿ ಗ್ರೂಪ್‌ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ವಿಶ್ವದ ಮೂರನೇ ಸಿರಿವಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ರಿಲಯನ್ಸ್​ ಮುಖ್ಯಸ್ಥ ಮುಖೇಶ್​​ ಅಂಬಾನಿ 11ನೇ ಸ್ಥಾನದಲ್ಲಿದ್ದಾರೆ.

gautam-adani-now-3rd-richest-person-in-the-world
ಗೌತಮ್​ ಅದಾನಿ ವಿಶ್ವದ ಮೂರನೇ ಸಿರಿವಂತ ವ್ಯಕ್ತಿ

By

Published : Aug 30, 2022, 9:55 AM IST

ನವದೆಹಲಿ:ನಾಲ್ಕು ತಿಂಗಳ ಹಿಂದಷ್ಟೇ ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​ ಅವರನ್ನು ಹಿಂದಿಕ್ಕಿದ್ದ ಭಾರತದ ದಿಗ್ಗಜ ಉದ್ಯಮಿ, ಅದಾನಿ ಗ್ರೂಪ್‌ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ಶ್ರೀಮಂತ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್​ ಅದಾನಿ ಅವರು 4ನೇ ಸ್ಥಾನದಲ್ಲಿದ್ದ ಫ್ರಾನ್ಸ್‌ನ ಉದ್ಯಮಿ ಎಲ್​ವಿಎಂಎಚ್​ ಮುಖ್ಯಸ್ಥ ಬರ್ನಾರ್ಡ್​ ಅರ್ನಾಲ್ಡ್​ ಅವರನ್ನು ಹಿಂದಿಕ್ಕಿದ್ದಾರೆ. ಅದಾನಿ ನಿವ್ವಳ ಆಸ್ತಿ ಈಗ 137.4 ಬಿಲಿಯನ್​ ಡಾಲರ್​ ತಲುಪಿದೆ.

60 ವರ್ಷದ ಅದಾನಿ, ಲೂಯಿ ಮಿಟಾನ್​ ಅಧ್ಯಕ್ಷ ಅರ್ನಾಲ್ಟ್​ ಅವರ ಸಂಪತ್ತನ್ನು ಮೀರಿಸುವ ಮೂಲಕ ವಿಶ್ವದ ಶ್ರೀಮಂತ ವ್ಯಕ್ತಿ, ಟೆಸ್ಲಾ ಮುಖ್ಯಸ್ಥ ಎಲಾನ್​ ಮಸ್ಕ್​(19 ಲಕ್ಷ ಕೋಟಿ ರೂ.), ಅಮೇಜಾನ್ ಸಂಸ್ಥಾಪಕ ಜೆಫ್​ ಬೆಜೋಸ್​(12.5 ಲಕ್ಷ ಕೋಟಿ ರೂ.) ಅವರಿಗಿಂತ ಹಿಂದಿದ್ದಾರೆ.

ಇನ್ನು ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾದ ರಿಲಯನ್ಸ್​ ಮುಖ್ಯಸ್ಥ ಮುಖೇಶ್​​ ಅಂಬಾನಿ 91.9 ಬಿಲಿಯನ್​ ಡಾಲರ್​ ಆಸ್ತಿ ಮೂಲಕ 11ನೇ ಸ್ಥಾನದಲ್ಲಿದ್ದಾರೆ. ಏಷ್ಯಾದ ವ್ಯಕ್ತಿಯೊಬ್ಬರು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಮೊದಲ ಮೂವರಲ್ಲಿ ಸ್ಥಾನ ಪಡೆದಿದ್ದು ಇದೇ ಮೊದಲಾಗಿದೆ.

ಓದಿ:ಎಲಾನ್​ ಮಸ್ಕ್​- ಟ್ವಿಟರ್​ ಫೈಟ್​.. ಮೈಕ್ರೋಬ್ಲಾಗಿಂಗ್​ನ ಭದ್ರತಾ ವೈಫಲ್ಯದ ಸಾಕ್ಷ್ಯ ನೀಡಲಿರುವ ಮಾಜಿ ಉದ್ಯೋಗಿ

ABOUT THE AUTHOR

...view details