ಢಾಕಾ (ಬಾಂಗ್ಲಾದೇಶ): ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಶನಿವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾದಲ್ಲಿ ಭೇಟಿಯಾಗಿ, ಭಾರತದ ಮೊದಲ ಬಹುರಾಷ್ಟ್ರೀಯ ವಿದ್ಯುತ್ ಯೋಜನೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ 1,600 ಮೆಗಾವ್ಯಾಟ್ ಅಲ್ಟ್ರಾ ಸೂಪರ್ ಕ್ರಿಟಿಕಲ್ ಗೊಡ್ಡಾ ಪವರ್ ಪ್ಲಾಂಟ್‌ನ ಲೋಡ್ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿದರು.
1,600 ಮೆಗಾವ್ಯಾಟ್ ಅಲ್ಟ್ರಾ ಸೂಪರ್ ಕ್ರಿಟಿಕಲ್ ಗೊಡ್ಡಾ ಪವರ್ ಪ್ಲಾಂಟ್ ಪ್ರಾರಂಭ ಮತ್ತು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಿದ್ದು ಸಂತಸ ತಂದಿದೆ. ಕೋವಿಡ್ ಸಂದರ್ಭದಲ್ಲಿ ಮೂರುವರೆ ವರ್ಷಗಳ ಕಾಲ ಈ ಯೋಜನೆ ಯಶಸ್ವಿಯಾಗಲು ಶ್ರಮಿಸಿದ ಭಾರತ ಮತ್ತು ಬಾಂಗ್ಲಾದೇಶದ ತಂಡಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಟ್ವೀಟ್‌ನಲ್ಲಿ ಅದಾನಿ ಬರೆದುಕೊಂಡಿದ್ದಾರೆ.
ಕಳೆದ ತಿಂಗಳ ಕೊನೆಯ ಅವಧಿಯಲ್ಲಿ ಅದಾನಿ ಪವರ್ 1,600 ಮೆಗಾವ್ಯಾಟ್ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆ ಶುರುಮಾಡಿದೆ. ಎಪಿಜೆಎಲ್ ತನ್ನ ಎರಡನೇ ಘಟಕ 2x800 ಮೆಗಾ ವ್ಯಾಟ್ ವ್ಯಾಗೊಡ್ಡಾ ಅಲ್ಟ್ರಾ-ಸೂಪರ್ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್‌ನಿಂದ ವಿದ್ಯುತ್ ಪೂರೈಕೆ ವಾಣಿಜ್ಯ ಕಾರ್ಯಾಚರಣೆ (COD) ಯಶಸ್ವಿಯಾಗಿದೆ. ಗೊಡ್ಡಾ ವಿದ್ಯುತ್ ಸ್ಥಾವರದ ಎರಡನೇ ಘಟಕ ಕಾರ್ಯಾಚರಣೆ ಸೇರಿದಂತೆ ವಿಶ್ವಾಸಾರ್ಹತೆ ಪರೀಕ್ಷೆಯ ಕುರಿತಾಗಿ ಜೂನ್ 25ರಂದು BPDB ಮತ್ತು ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಬಾಂಗ್ಲಾದೇಶದ (PGCB) ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ಣಗೊಂಡಿತು.