ನವದೆಹಲಿ:ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ 4ನೇ, ದೇಶದ ಮೊದಲ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿಗೆ ಬೆದರಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ 'ಝಡ್' ಭದ್ರತೆ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ.
IB recommend Z security to Gautam Adani:ಗೌತಮ್ ಅದಾನಿ ಮತ್ತು ಕುಟುಂಬಕ್ಕೆ ಬೆದರಿಕೆಗಳು ತೀವ್ರವಾಗಿವೆ. ಇನ್ನಷ್ಟು ಸುರಕ್ಷತೆಗಾಗಿ "ಝಡ್ ಕೆಟಗರಿ" ಭದ್ರತೆ ಒದಗಿಸಬೇಕು ಎಂದು ಗುಪ್ತಚರ ದಳ ನೀಡಿದ ವರದಿಯ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಗುಪ್ತಚರ ದಳದಿಂದ ಬಂದಿರುವ ಮಾಹಿತಿಯ ಆಧಾರದ ಮೇಲೆ, ಅದಾನಿಗೆ ಸರ್ಕಾರವು ಉನ್ನತ ಮಟ್ಟದ ಭದ್ರತೆಯನ್ನು ಒದಗಿಸಿದೆ. ಅದಕ್ಕಾಗಿ ಇಡೀ ವೆಚ್ಚವನ್ನು ಅವರೇ ಭರಿಸಲಿದ್ದಾರೆ.