ಕರ್ನಾಟಕ

karnataka

ETV Bharat / bharat

ಬಿಲ್​ ಗೇಟ್ಸ್ ಮೀರಿಸಿದ ಗೌತಮ್ ಅದಾನಿ.. ಜಗತ್ತಿನ ನಾಲ್ಕನೇ ಶ್ರೀಮಂತ ವ್ಯಕ್ತಿ ಪಟ್ಟ - ಎಲೋನ್ ಮಸ್ಕ್ ವಿಶ್ವದ ಸಿರಿವಂತ ವ್ಯಕ್ತಿ

ಇತ್ತೀಚೆಗೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದ ಉದ್ಯಮಿ ಗೌತಮ್ ಅದಾನಿ, ಈಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ್ದಾರೆ.

gautam-adani-becomes-fourth-richest-person-of-the-world
ಬಿಲ್​ ಗೇಟ್ಸ್ ಮೀರಿಸಿದ ಗೌತಮ್ ಅದಾನಿ... ಜಗತ್ತಿನ ನಾಲ್ಕನೇ ಶ್ರೀಮಂತ ವ್ಯಕ್ತಿ ಪಟ್ಟ

By

Published : Jul 21, 2022, 4:52 PM IST

ನವದೆಹಲಿ: ಉದ್ಯಮಿ ಗೌತಮ್ ಅದಾನಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್​ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ್ದಾರೆ. 60 ವರ್ಷ ವಯಸ್ಸಿನ ಅದಾನಿ ನಿವ್ವಳ ಆಸ್ತಿ ಮೌಲ್ಯವು ಗುರುವಾರ 115.5 ಶತಕೋಟಿ ಡಾಲರ್​ಗೆ ತಲುಪಿದೆ.

ಬಿಲ್​ ಗೇಟ್ಸ್ ಅವರ ನಿವ್ವಳ ಆಸ್ತಿ ಮೌಲ್ಯ 104.6 ಬಿಲಿಯನ್ ಡಾಲರ್​​ನಷ್ಟಿದೆ. ಮತ್ತೊಬ್ಬ ಉದ್ಯಮಿ ಮುಖೇಶ್ ಅಂಬಾನಿ 90 ಬಿಲಿಯನ್ ಡಾಲರ್ ನಿವ್ವಳ ಸಂಪತ್ತನ್ನು ಹೊಂದಿದ್ದು, ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ 235.8 ಬಿಲಿಯನ್‌ ಡಾಲರ್​ ಸಂಪತ್ತಿನೊಂದಿಗೆ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅದಾನಿ ಗ್ರೂಪ್​ ಅಧ್ಯಕ್ಷರಾದ ಗೌತಮ್ ಅದಾನಿ ಕಳೆದ ಹತ್ತು ವರ್ಷಗಳಲ್ಲಿ ಬಂದರು, ಗಣಿ ಮತ್ತು ಹಸಿರು ಇಂಧನ ಉದ್ಯಮದ ಮೂಲಕ ಸಾಕಷ್ಟು ಮುನ್ನಲೆಗೆ ಬಂದಿದ್ದಾರೆ. ಇತ್ತೀಚೆಗೆ ಭಾರತ ಮಾತ್ರವಲ್ಲದೇ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಯನ್ನು ಅದಾನಿ ಗಳಿಸಿದ್ದರು. ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಅಂದಾನಿ ಹೊರಹೊಮ್ಮಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಅದಾನಿ ಗ್ರೂಪ್‌ನ ಕೆಲ ಷೇರುಗಳು ಶೇ.600ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಮೂರು ವರ್ಷಗಳಲ್ಲಿ ಏಳು ವಿಮಾನ ನಿಲ್ದಾಣಗಳ ಮೇಲೆ ಅದಾನಿ ಗ್ರೂಪ್‌ ಹಿಡಿತ ಸಾಧಿಸಿದೆ. ಅಲ್ಲದೇ, ಭಾರತದ ವಿಮಾನಯಾನದ ಕಾಲು ಭಾಗದಷ್ಟು ಅದಾನಿ ಗ್ರೂಪ್‌ ಹಿಡಿತ ಹೊಂದಿದೆ. ಇಷ್ಟೇ ಅಲ್ಲ, ಗಡೋಟ್ ಸಂಸ್ಥೆ ಸಹಭಾಗಿತ್ವದಲ್ಲಿ ಇಸ್ರೇಲ್‌ನಲ್ಲಿ ಬಂದರಿನ ಖಾಸಗೀಕರಣದ ಟೆಂಡರ್​ ಸಹ ಅದಾನಿ ಗುಂಪು ಗೆದ್ದಿದೆ.

ಇನ್ನೂ ಓದಿ:40 ವರ್ಷಗಳಲ್ಲಿಯೇ ಅತ್ಯಧಿಕ ಹಣದುಬ್ಬರ; ಬ್ರಿಟನ್​ನಲ್ಲಿ ಏನಾಗುತ್ತಿದೆ?

ABOUT THE AUTHOR

...view details